ಭಾರತ, ಜನವರಿ 31 -- ಅಣ್ಣಯ್ಯ ಧಾರಾವಾಹಿಯ ಈ ಸಂಚಿಕೆ ನೋಡಿದರೆ, ಅಮೃತಧಾರೆ ಹಾಗೂ ಅಣ್ಣಯ್ಯ ಎರಡೂ ಧಾರಾವಾಹಿಗಳನ್ನು ಒಂದೇ ಬಾರಿ ನೋಡುತ್ತಿದ್ದೇನೆ ಎಂದು ನಿಮಗನಿಸಬಹುದು. ಹೌದು, ಭೂಮಿಕಾ ಹಾಗೂ ಪಾರು ಇಬ್ಬರೂ ಒಟ್ಟಾಗಿ ಒಂದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಣ್ಣಯ್ಯನ ಪ್ರೀತಿ ಬಗ್ಗೆ ಗೊಂದಲ ಹೊಂದಿರುವ ಪಾರು, ತಾನು ಸರಿ ನಿರ್ಧಾರ ತೆಗೆದುಕೊಂಡಿದ್ದೇನೋ? ಅಥವಾ ತಪ್ಪೋ? ಎಂದು ಅರ್ಥ ಆಗದೇ ಇನ್ನೊಬ್ಬರ ಸಲಹೆ ಕೇಳುತ್ತಿದ್ದಾಳೆ. ಪಾರುಗೆ ಭೂಮಿಕಾ ಸಹಾಯ ಮಾಡುತ್ತಿದ್ದಾಳೆ.

ಪಾರು ತನ್ನ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ವಿಸ್ತಾರವಾಗಿ ಭೂಮಿಕಾ ಹತ್ತಿರ ಹೇಳಿಕೊಂಡಿದ್ಧಾಳೆ. ಮಾನಸಿಕವಾಗಿ ತುಂಬಾ ನೊಂದಿದ್ದಾಳೆ. ಅವಳಿಗೆ ಸಾಂತ್ವನ ಹೇಳಬೇಕಾದ ಪರಿಸ್ಥಿತಿ ಈಗ ಭೂಮಿಕಾ ಮುಂದಿದೆ. ಅದೆಲ್ಲವನ್ನೂ ಅರ್ಥ ಮಾಡಿಕೊಂಡು ಭೂಮಿಕಾ, ತುಂಬಾ ಚೆನ್ನಾಗಿ ಅವಳ ಬದುಕನ್ನು ವಿವರಿಸುತ್ತಾಳೆ. ಪಾರುಗೆ ಸಮಾಧಾನ ಮಾಡುತ್ತಾಳೆ. "ಎಲ್ಲ ನೀನು ಅಂದುಕೊಂಡಂತೆ ಇಲ್ಲ. ನಿನ್ನ ಮಾವ ತುಂಬಾ ಒಳ್ಳೆಯವನು. ಅವನು ನಿನಗೆ ಯಾವಾಗಲೂ ಒಳ್ಳೆಯದನ್ನೇ ಬಯಸಿ...