ಭಾರತ, ಮಾರ್ಚ್ 19 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮನೆ ಇನ್ನೇನು ಹರಾಜಾಗುತ್ತದೆ ಎಂಬ ಸಂದರ್ಭ ಬಂದಿತ್ತು. ಆದರೆ ಪಾರು ತನ್ನ ಜಾಣತನದಿಂದ ಮನೆ ಉಳಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ ಹಣ ಸಿಗುವ ಭರವಸೆ ಕೂಡ ಇದೆ. ಹೀಗಿರುವಾಗ ತಾನು ಗಂಡನ ಮನೆಯಲ್ಲಿ ಇದ್ದುಕೊಂಡೇ ರಶ್ಮಿ ತುಂಬಾ ನೋವು ಅನುಭವಿಸುತ್ತಾ ಇದ್ದಾಳೆ. ತನಗಾದ ಯಾವ ಕಷ್ಟವನ್ನೂ ಸಹ ಅವಳು ಯಾರೊಂದಿಗೂ ಹೇಳಿಕೊಳ್ಳುತ್ತಿಲ್ಲ. ಆದರೆ, ಪಾರುಗೆ ರಶ್ಮಿಗಾಗುವ ತೊಂದರೆಗಳ ಸೂಚನೆ ಸಿಕ್ಕಿದೆ. ಆ ಕಾರಣಕ್ಕೆ ಪಾರು ರಶ್ಮಿ ಮೇಲೆ ಒಂದು ಕಣ್ಣಿಟ್ಟಿದ್ದಾಳೆ. ರಶ್ಮಿ ಹಾಗೂ ಸೀನ ಮದುವೆ ಆದಮೇಲೆ ಮತ್ತೆ ತವರಿಗೆ ಬಂದಿದ್ದಾರೆ.

ಸೀನ ಅಣ್ಣಯ್ಯನ ಮೇಲಿನ ಕಾಳಜಿಗೆ ಮತ್ತೆ ರಶ್ಮಿ ತವರಿಗೆ ಬಂದಿದ್ದಾನೆ. ಶಿವು ಮನೆ ಹರಾಜಾಗುವುದು ಸೀನನಿಗೂ ಇಷ್ಟ ಇರುವುದಿಲ್ಲ. ರಶ್ಮಿ ತಾನು ಅಣ್ಣನನ್ನು ನೋಡಬೇಕು ಎಂದು ತುಂಬಾ ಒತ್ತಾಯ ಮಾಡುತ್ತಾ ಇರುತ್ತಾಳೆ. "ಎಲ್ಲೇ ಹೋಗೋದಾದ್ರೂ ಸೀನನ ಜತೆಯೇ ಹೋಗಬೇಕು" ಎಂದು ಶಿವು ಹೇಳಿರುತ್ತಾನೆ. ಆ ಮಾತಿಗೆ ಕಟ್ಟು ಬಿದ್ದು, ಸೀನನ ಜತೆಯೇ ಹೋಗಬೇಕು ಎಂದು ರಶ್ಮಿ ...