ಭಾರತ, ಫೆಬ್ರವರಿ 8 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮತ್ತು ಪಾರು ಇಬ್ಬರೂ ದೇವಸ್ಥಾನಕ್ಕೆ ಹೋಗಿದ್ದಾರೆ. ಆದರೆ ನೆಮ್ಮದಿಯಿಂದ ಬೇಡಿಕೊಳ್ಳಲೂ ಸಹ ಬಿಡದಂತೆ ಗಂಡಿನ ಮನೆಯವರು ಶಿವುಗೆ ಕಾಟ ಕೊಡುತ್ತಿದ್ದಾರೆ. ಪಾರು ದೇವರ ಮುಂದೆ ಕಣ್ಣು ಮುಚ್ಚಿಕೊಂಡು ಬೇಡಿಕೊಳ್ಳುತ್ತಾ ಇರುತ್ತಾಳೆ. ಆದರೆ ಶಿವುಗೆ ಯಾರದೋ ಪೋನ್ ಬರುತ್ತದೆ. ಅವನು ಅಲ್ಲಿಂದ ಸುಮ್ಮನೆ ಹೊರಗಡೆ ಹೋಗುತ್ತಾನೆ. ಆದರೆ ಪಾರುಗೆ ಹೇಳುವುದಿಲ್ಲ. ಅವನಿಗೆ ಗಂಡಿನ ಮನೆಯವರು ಕಾಲ್ ಮಾಡಿರುತ್ತಾರೆ. ಮದುವೆಗೆ ಇನ್ನು ಕೇವಲ ಎರಡೇ ದಿನ ಬಾಕಿ ಇರುತ್ತದೆ. ಆದರೆ ಗಂಡಿನ ಕಡೆಯವರ ವರದಕ್ಷಿಣೆ ಹಣ ಏರುತ್ತಲೇ ಇರುತ್ತದೆ.

ಶಿವು ಹೊರಗಡೆ ಬಂದು ಮಾತನಾಡಲು ಆರಂಭಿಸುತ್ತಾನೆ. ಮಾತನಾಡುತ್ತಾ ಇದ್ದಾಗ, ಗಂಡಿನ ಅಪ್ಪ, "ಹಣ ಎಲ್ಲ ಹೊಂದಾಣಿಕೆ ಮಾಡಿದ್ಯಂತೆ ಶಿವು" ಎಂದು ಹೇಳುತ್ತಾರೆ. ಅವರ ಮಾತು ಕೇಳಿದರೆ ತುಂಬಾ ಖುಷಿಯಲ್ಲಿದ್ದಂತೆ ತೋರುತ್ತಿತ್ತು. ಆದರೆ ಅವರ ಮಾತಿನ ವರಸೆ ಬದಲಾಗುತ್ತಾ ಹೋಯಿತು. ಅವರು ಇನ್ನಷ್ಟು ಹಣ ಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ. ಅಂದು ಐದು ಲಕ್ಷ ಹಣಕ್...