ಭಾರತ, ಫೆಬ್ರವರಿ 13 -- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಮತ್ತು ಶಿವು ಇಬ್ಬರು ಈಗೀಗ ಪ್ರೀತಿಸಲು ಆರಂಭಿಸಿದ್ದಾರೆ. ಆದರೆ ಪಾರು ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂಬ ಸತ್ಯ ಇನ್ನೂ ಶಿವುಗೆ ಗೊತ್ತಾಗಿಲ್ಲ. ಪಾರು ಮಾತ್ರ ನಾನಾ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾಳೆ. ಶಿವು ತಂಗಿ ಮದುವೆ ಮಾಡಲು ಹೇಗಾದರೂ ಹಣ ಹೊಂದಿಸಬೇಕು. ರಶ್ಮಿಎ ಯಾವುದೇ ಕಾರಣಕ್ಕೂ ನೋವಾಗಬಾರದು ಎಂದು ಅಂದುಕೊಂಡಿದ್ದಾನೆ. ಅದೇ ಕಾರಣಕ್ಕೆ ಗಂಡಿನ ಕಡೆಯವರು ಕೇಳಿದಷ್ಟು ಹಣ ಹೊಂದಿಸಿದ್ದಾನೆ. ಅದರೆ ಪಾರು ಈ ವಿಚಾರ ತಿಳಿದುಕೊಂಡು ತನ್ನಿಂದಲೂ ಸಹಾಯ ಆಗಲಿ ಎಂದು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾಳೆ. ಹೇಗೋ ಮಾಡಿ ಒಂದಷ್ಟು ಹಣ ಹೊಂದಿಸಿಕೊಂಡು ಬಂದಿದ್ದಾಳೆ.

ಹಿಂದಿನಿಂದ ಬಂದು ಶಿವು ಕಣ್ಣು ಮುಚ್ಚಿ, ನಾನು ನಿನಗೆ ಏನೋ ಕೊಡ್ತೀನಿ ಎಂದು ಹೇಳಿದ್ದಾಳೆ. ಆದರೆ ಅದಕ್ಕೂ ಮುನ್ನ ಅವಳು ಶಿವು ಕಣ್ಣು ಮುಚ್ಚಿದಾಗ "ನಾನು ಯಾರೆಂದು ಹೇಳಬೇಕು" ಎಂದು ಶಿವು ಹತ್ತಿರ ಹೇಳಿರುತ್ತಾಳೆ. ಶಿವು ಕೂಡ ಬೇಕು ಎಂದೇ ಸಾಕಷ್ಟು ಹುಡುಗಿಯರ ಹೆಸರು ಹೇಳುತ್ತಾನೆ. ಪಾರುಗೆ ಇದರ...