ಭಾರತ, ಏಪ್ರಿಲ್ 2 -- Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 165ನೇ ಎಪಿಸೋಡ್‌ ಕಥೆ ಹೀಗಿದೆ. ಇಂದು ಹೇಗಾದರೂ ಮಾಡಿ ನಾನು ಮಾವನಿಗೆ ಪ್ರಪೋಸ್‌ ಮಾಡಬೇಕೆಂದು ಪಾರು ನಿರ್ಧರಿಸುತ್ತಾಳೆ. ಡಿವೋರ್ಸ್‌ ಪೇಪರ್‌ ಹರಿದುಹಾಕಿದ್ದಕ್ಕೆ ಪಾರು ಕ್ಷಮೆ ಕೇಳುವ ಶಿವು, ಹೊಸ ಪೇಪರ್‌ ರೆಡಿ ಮಾಡಿಸುತ್ತೇನೆ, ನೀನು ಯೋಚಿಸಬೇಡ ನನ್ನ ತಂಗಿಯರ ಮದುವೆ ಆಗುತ್ತಿದ್ದಂತೆ ನಿನಗೆ ಡಿವೋರ್ಸ್‌ ಕೊಡುತ್ತೇನೆ ಎನ್ನುತ್ತಾನೆ. ಅವನ ಮಾತು ಕೇಳಿ ಪಾರ್ವತಿ ಸಿಟ್ಟಾಗುತ್ತಾಳೆ. ನನಗೆ ಡಿವೋರ್ಸ್‌ ಬೇಡ, ಈಗಲ್ಲ ಇನ್ನೆಂದಿಗೂ ಬೇಡ ಎನ್ನುತ್ತಾಳೆ. ಪಾರು ಮಾತನ್ನು ಶಿವು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾನೆ.

ನನ್ನ ಪ್ರೀತಿಯನ್ನು ಮಾವನಿಗೆ ಅರ್ಥ ಮಾಡಿಸಬೇಕು ಎಂದು ಪಾರು, ನಾದಿನಿಯರ ಸಹಾಯ ಕೇಳುತ್ತಾಳೆ. ಗುಡ್ಡವೊಂದರಲ್ಲಿ ಹೂವಿನ ಅಲಂಕಾರ ಮಾಡಿದ ಮಂಟಪದಲ್ಲಿ ಕೇಕ್‌ ಕಟಿಂಗ್‌ ಮಾಡುವ ಮೂಲಕ ಪ್ರೀತಿ ಹೇಳಿಕೊಳ್ಳುವಂತೆ ನಾದಿನಿಯರು ಐಡಿಯಾ ನೀಡುತ್ತಾರೆ, ಜೊತ...