ಭಾರತ, ಫೆಬ್ರವರಿ 10 -- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮತ್ತು ಪಾರ್ವತಿ ಇಬ್ಬರೂ ರಶ್ಮಿ ಮದುವೆ ಲಗ್ನ ಪತ್ರಿಕೆ ಕೊಡಲು ಪಾರು ತವರಿಗೆ ಬಂದಿದ್ದಾರೆ. ಅವರು ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿಯೇ ವೀರಭದ್ರನ ಆರ್ಭಟ ಆರಂಭವಾಗಿದೆ. ತನ್ನ ಇಬ್ಬರು ಹೆಂಡತಿಯ ಬಗ್ಗೆ ಅವನಿಗೆ ಸತ್ಯ ಗೊತ್ತಾದಂತಿದೆ. ರಶ್ಮಿ ಮದುವೆ ನಿಲ್ಲಿಸಲು ಪಾರು ತಾಯಿ ಪ್ರಯತ್ನ ಮಾಡುತ್ತಾಳೆ ಎಂಬ ವಿಚಾರವನ್ನಿಟ್ಟುಕೊಂಡು, ಪಾರು ಹಾಗೂ ಶಿವು ಬಂದಾಗ ಅವರ ಬಳಿ ತನ್ನ ಹೆಂಡತಿಯರಿಗೆ ಮಾತಾಡದಂತೆ ಸೂಚನೆ ನೀಡುತ್ತಾನೆ. ಅವರು ಸುಮ್ಮನೇ ವೀರಭದ್ರನ ಮುಂದೆ ತಲೆಯಾಡಿಸಿದರೂ ಸಹ ಆಲೋಚನೆ ಬೇರೆಯೇ ಇರುತ್ತದೆ. ಸ್ವಲ್ಪ ಸಮಯದಲ್ಲಿ ಪಾರು ಹಾಗೂ ಶಿವು ಮಾವನ ಮನೆಗೆ ಬರುತ್ತಾರೆ.

ಬಂದ ತಕ್ಷಣ ಶಿವು ಒಳ್ಳೆ ರೀತಿಯಲ್ಲಿ ಮಾತಾಡಲು ಆರಂಭಿಸಬೇಕು ಎನ್ನುವಷ್ಟರಲ್ಲಿ ಪಾರು ಶಿವುಗೆ ತಿಳಿಯದ ರೀತಿಯಲ್ಲಿ ಒಂದೊಂದೇ ಕೊಂಕಾಡಲು ಆರಂಭಿಸುತ್ತಾಳೆ. ಯಾಕೆಂದರೆ ಪಾರುಗೆ ವೀರಭದ್ರನ ನಿಜ ಬಣ್ಣ ಗೊತ್ತಾಗಿದೆ. ಮೋಸ ಮಾಡಿ ಅಣ್ಣಯ್ಯನ ಆಸ್ತಿಯನ್ನು ಅವನು ಕಬಳಿಸಿದ್ದಾನೆ ಎ...