ಭಾರತ, ಮಾರ್ಚ್ 14 -- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಆದಾಗಿನಿಂದ ಯಾರಿಗೂ ನೆಮ್ಮದಿ ಇಲ್ಲ. ಎಲ್ಲರೂ ಅಳುತ್ತಿದ್ದಾರೆ.

ರಶ್ಮಿಯ ಮದುವೆ ನಿಂತು ಹೋಗುವಂತೆ ಮಾಡಿದ್ದು ಶಿವು ತಾಯಿ ಶಾರದಾ. ಆದರೆ, ಅದರ ಹಿಂದೆ ಒಂದು ಬಲವಾದ ಕಾರಣ ಇದೆ.

ಆ ಕಾರಣ ಯಾರಿಗೂ ಗೊತ್ತಿಲ್ಲ. ಮದುವೆ ಮನೆಯಲ್ಲಿದ್ದ ಹಣವನ್ನು ಅವಳು ಕದ್ದು ಮದುವೆ ನಿಲ್ಲಿಸಿದ್ದಳು. ಆದರೆ, ಈಗ ಆ ಹಣವನ್ನು ಹಿಂದಿರುಗಿಸುವ ಪ್ರಯತ್ನ ಮಾಡುತ್ತಿದ್ದಾಳೆ.

ಮಾಕಾಳಮ್ಮನೇ ಮಾತಾಡುತ್ತಿದ್ದಾಳೆ ಎನ್ನುವ ರೀತಿಯಲ್ಲಿ ಶಾರದಾ, ಪಾರು ಜತೆ ಮಾತಾಡಿದ್ದಾಳೆ. ಅವಳ ಮಾತನ್ನು ಕೇಳಿ ಪಾರು ಭಯದಲ್ಲಿದ್ದಾಳೆ.

ರಾತ್ರಿ ಹೊತ್ತು ಮನೆ ಪಕ್ಕದಲ್ಲಿ ಯಾರೋ ಸುಳಿದಂತಾಗಿ ಪಾರು ಹೊರಗಡೆ ಹೋಗುತ್ತಾಳೆ. ಶಿವು ಮಾತಾಡುತ್ತಿದ್ದ ಮರದ ಬಳಿ ಹೋಗಿ ನಿಲ್ಲುತ್ತಾಳೆ.

ಆದರೆ ಪಾರುಗೊಂದು ಆಶ್ಚರ್ಯ ಕಾದಿತ್ತು, ಮರದ ಹಿಂದಿನಿಂದ ಯಾರದೋ ಧ್ವನಿ ಕೇಳಿಸುತ್ತಿತ್ತು. ಆ ಧ್ವನಿ ಯಾರದ್ದೆಂದು ಪಾರುಗೆ ಗೊತ್ತಾಗಲಿಲ್ಲ.

ಮದರ ಹಿಂದೆ ನಿಂತ ಶಿವು ತಾಯಿ ಶಾರದೆ ಪಾರುಗೆ ಧೈರ್ಯ ಹೇಳುತ್ತಿದ್ದಳು. "ನೀವ್ಯ...