ಭಾರತ, ಜನವರಿ 26 -- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಅನುಮಾನದಲ್ಲಿ ಮುಳುಗಿದ್ದಾಳೆ. ರಾಣಿ ಆಡಿದ ಮಾತು ಕೇಳಿ ಅವಳಿಗೆ ತಾನು ನಿಜವಾಗೂ ಪ್ರೀತಿಯಲ್ಲಿದ್ದೇನೋ? ಅಥವಾ ಇದು ತನ್ನ ಭ್ರಮೆಯೋ? ಎಂದು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಆ ಕಾರಣಕ್ಕಾಗಿ ಅವಳನ್ನು ಇನ್ನಷ್ಟು ಯಾರೊಂದಿಗಾದರೂ ಈ ಬಗ್ಗೆ ಮಾತಾಡಬೇಕು ಎಂದು ಅಂದುಕೊಂಡಿದ್ದಾಳೆ. ಆಗ ಅವಳಿಗೆ ಸಹಾಯ ಮಾಡಿದ್ದು ಅಮೃತಧಾರೆ ಧಾರಾವಾಹಿಯ ಭೂಮಿಕಾ.. ಹೌದು, ಈ ಬಾರಿ ಅಮೃತಧಾರೆ ಹಾಗೂ ಅಣ್ಣಯ್ಯ ಧಾರಾವಾಹಿಯ ಸಮ್ಮಿಲನವಾಗಿದೆ. ಹೋಟೆಲ್‌ ಒಂದಕ್ಕೆ ಪಾರು ಹಾಗೂ ಭೂಮಿಕಾ ಹೋಗಿದ್ದಾರೆ. ಅಲ್ಲಿ ಅವರಿಬ್ಬರು ಭೇಟಿಯಾಗಿದ್ದಾರೆ.

ಪಾರು ಮೊದಲೇ ಹೋಗಿ ಹೋಟೆಲ್‌ನಲ್ಲಿ ಕಾಯುತ್ತಾ ಕುಳಿತಿರುತ್ತಾಳೆ. ನಂತರ ಅಲ್ಲಿಗೆ ಭೂಮಿಕಾ ಬರುತ್ತಾಳೆ. ತುಂಬಾ ಸಮಯದಿಂದ ತಲೆಕೆಡಿಸಿಕೊಂಡು ಪಾರು ಅಲ್ಲೇ ಕುಳಿತಿರುವಂತೆ ತೋರುತ್ತದೆ. ಯಾಕೆಂದರೆ ಅವಳ ಕಣ್ಣಲ್ಲಿ ನೀರಿರುತ್ತದೆ. ಓಡಿ ಹೋಗಿ ಭೂಮಿಕಾಳನ್ನು ಅಪ್ಪಿಕೊಳ್ಳುತ್ತಾಳೆ. ಅಲ್ಲಿಂದಲೇ ಭೂಮಿಕಾ ಪಾರುಗೆ ಸಮಾಧಾನ ಮಾಡುತ್ತಾಳೆ. "ನನಗೆ ನನ್ನ ಪ್ರೀತಿಯನ್ನ...