ಭಾರತ, ಫೆಬ್ರವರಿ 5 -- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಇಬ್ಬರು ಒಂದೇ ಕೋಣೆಯಲ್ಲಿ ಮಲಗುತ್ತಿದ್ದರೇ ಹೊರತು ಒಂದೇ ಹಾಸಿಗೆಯಲ್ಲಿ ಮಲಗುತ್ತಿರಲಿಲ್ಲ. ಈ ವಿಚಾರ ಮಂಜಿ ಹಾಗೂ ರಾಣಿ ಇಬ್ಬರಿಗೂ ಗೊತ್ತಾಗಿತ್ತು. ಅದಕ್ಕೆ ಅವರಿಬ್ಬರೂ ಉಪಾಯ ಮಾಡಿ ಪಾರು ಮತ್ತು ಶಿವು ಒಂದಾಗುವಂತೆ ಮಾಡುತ್ತಿದ್ದಾರೆ. ಶಿವು ನೆಲಕ್ಕೆ ಮಲಗಿಕೊಂಡಿರುತ್ತಾನೆ. ಪಾರು ದಿನವೂ ಮಂಚದ ಮೇಲೆ ಮಲಗಿಕೊಂಡಿರುತ್ತಾಳೆ. ಆದರೆ ಪಾರುಗೆ ತಾನೂ ಶಿವು ಜತೆಯಲ್ಲೇ ಮಲಗಬೇಕು ಎಂದು ಆಸೆ ಆಗುತ್ತದೆ. ರಾತ್ರಿ ಬೆಳಗಾಗುವುದರಲ್ಲಿ ಪಾರು ಶಿವು ಹಾಸಿಗೆಯಲ್ಲಿ ಮಲಗಿರುತ್ತಾಳೆ. ಅದೇ ವಿಚಾರವನ್ನು ದೊಡ್ಡದಾಗಿ ಹೇಳಲು ಪಾರು ಬಯಸುತ್ತಾಳೆ. ಆದರೆ ಶಿವು ಅವಳ ಬಾಯಿ ಮುಚ್ಚುತ್ತಾನೆ.

ಆಗ ಪಾರು ಅವನ ಕೈಗೆ ಕಚ್ಚುತ್ತಾಳೆ. ನೋವಿನಿಂದ ಶಿವು ಕೂಗಿಕೊಂಡ ಧ್ವನಿ ಕೇಳಿ, ಹೊರಗಿನಿಂದ ಮಂಜಿ ಹಾಗೂ ರಾಣಿ ಬರುತ್ತಾರೆ. ಅವರಿಬ್ಬರೂ ಬಂದು ಏನಾಯ್ತು? ಎಂದು ಪ್ರಶ್ನೆ ಮಾಡುತ್ತಾರೆ. ಆಗ ಪಾರು ಹೇಳುತ್ತಾಳೆ. "ಮಾವನಿಗೆ ಬೆನ್ನು ನೋವಾಗಿತ್ತು, ಆ ಕಾರಣಕ್ಕಾಗಿ ಅವ...