ಭಾರತ, ಮಾರ್ಚ್ 18 -- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆಗೆಂದು ಮಾಡಿದ ಸಾಲದ ಕಾರಣದಿಂದ ಶಿವು ಮನೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಆದರೆ, ಪಾರು ತುಂಬಾ ಜಾಣೆ. ಅವಳು ತನ್ನ ಜಾಣತನದಿಂದ ಕೆಲವು ಸಾಕ್ಷಿಗಳನ್ನು ಹುಡುಕಿಕೊಂಡು ಬಂದಿದ್ದಾಳೆ. ಮನೆಯನ್ನು ಯಾವುದೇ ಕಾರಣಕ್ಕೂ ಹರಾಜು ಹಾಕುವಂತಿಲ್ಲ ಎಂದು ಹೇಳಿದ್ದಾಳೆ. ಅಣ್ಣಯ್ಯ ಹಾಗೂ ಅವನ ಎಲ್ಲಾ ತಂಗಿಯರು ತುಂಬಾ ಬೇಸರ ಮಾಡಿಕೊಂಡು ಅಸಹಾಯಕ ಸ್ಥಿತಿಯಲ್ಲಿ ನಿಂತುಕೊಂಡಿರುವಾಗ ಪಾರು ಮಾತ್ರ ತಾನೇನು ಮಾಡಲು ಸಾಧ್ಯ ಎಂದು ಯೋಚಿಸುತ್ತಿದ್ದಳು. ಮಾಕಾಳಮ್ಮನ ಬಳಿ ಹೋದರೆ ಪರಿಹಾರ ಸಿಗುತ್ತದೆ ಎಂದು ಅಂದುಕೊಂಡಿದ್ದಳು.

ಇತ್ತ ರಶ್ಮಿಗೆ ವಿಷಯ ಗೊತ್ತಾದರೂ ಅವಳು ಮಾತ್ರ ಮನೆಯಲ್ಲೇ ಇರುವ ಪರಿಸ್ಥಿತಿ ಲೀಲಾಳಿಂದ ಉಂಟಾಗಿತ್ತು. ರಶ್ಮಿಗೂ ಹೇಗಾದರೂ ಮಾಡಿ ತಾನು ಅಣ್ಣಯ್ಯ ಇದ್ದಲ್ಲಿಹೆ ಹೋಗಬೇಕು ಎಂಬ ಬಯಕೆ ಆಗುತ್ತಲೇ ಇತ್ತು. ಅಣ್ಣಯ್ಯನ ಮನೆ ಹರಾಜು ಹಾಕುವ ವೇಳೆ ಇನ್ನು ಕೊನೆ ಸಲ ಹರಾಜು ಕೂಗುತ್ತಾರೆ ಎನ್ನುವಷ್ಟರಲ್ಲಿ ಅಲ್ಲಿಗೆ ಪಾರು ಬರುತ್ತಾಳೆ. ಬಂದ...