ಭಾರತ, ಫೆಬ್ರವರಿ 11 -- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆಗೆ ಎಲ್ಲ ತಯಾರಿ ನಡೆದಿದೆ. ರಶ್ಮಿ ಹಸೆಮಣೆ ಏರಲು ರೆಡಿಯಾಗಿದ್ದಾಳೆ. ಸಂಪ್ರದಾಯ, ಶಾಸ್ತ್ರ ಎಲ್ಲವನ್ನೂ ಅನುಸರಿಸುತ್ತಾ ಸರಳವಾಗಿ ಅರಶಿನ ಶಾಸ್ತ್ರ ಮಾಡುತ್ತಿದ್ದಾರೆ. ಅಣ್ಣಯ್ಯ ತಂಗಿಯರಿಗೆಲ್ಲ ಸಂಭ್ರದ ದಿನ ಇದಾಗಿದ್ದು, ಪಾರು ಎಲ್ಲ ಜವಾಬ್ಧಾರಿಯನ್ನು ತೆಗೆದುಕೊಂಡು ರಶ್ಮಿ ಮದುವೆ ಮಾಡಿಸಲು ಮುಂದೆ ನಿಂತಿದ್ದಾಳೆ. ಎಲ್ಲರೂ ಅರಶಿನ ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ. ಕಾವೇರಿ ಅಜ್ಜಿ ಕೂಡ ಬಂದಿದ್ದಾರೆ. ಮಾದಪ್ಪಣ್ಣನ ಮನೆಯವರೂ ಬಂದಿದ್ದಾರೆ. ಶಿವು, ಮಾವ ಬರುವುದಕ್ಕಾಗಿಯೇ ಕಾದಿರುತ್ತಾನೆ. ಇನ್ನೇನು ಅರಶಿನ ಶಾಸ್ತ್ರ ಆರಂಭಿಸಬೇಕು ಎನ್ನುವಷ್ಟರಲ್ಲಿ ಕಾವೇರಿ ಅಜ್ಜಿ ಪಾರು ಬಳಿ ಹೇಳಿದ ಮಾತು ಬಹಳ ಅರ್ಥಪೂರ್ಣವಾಗಿದೆ.

"ತಾಯಿ ಸ್ಥಾನದಲ್ಲಿ ನಿಂತು ನಿನೇ ಅರಶಿನ ಹಚ್ಚಮ್ಮ ಪಾರು" ಎಂದು ಕಾವೇರಿ ಅಜ್ಜಿ ಹೇಳುತ್ತಾರೆ. ಆಗ ಪಾರು ತಾನೇ ಮೊದಲು ರಶ್ಮಿಗೆ ಅರಶಿನ ಹಚ್ಚಿದ್ದಾಳೆ. ಎಂದಿಗೂ ನಾಚಿಕೊಳ್ಳದ ರಶ್ಮಿ ಮುಖದಲ್ಲಿ ನಾಚಿಕೆ ಎದ್ದು ತೋರುತ್ತಿದೆ. ರಶ್ಮಿ...