ಭಾರತ, ಮಾರ್ಚ್ 12 -- ಅಣ್ಣಯ್ಯ ಧಾರಾವಾಹಿಯಲ್ಲಿ ಮಾದಪ್ಪಣ್ಣ ಕೆಲಸ ಇರುವ ಕಾರಣ ಬೆಂಗಳೂರಿಗೆ ಹೋಗಿದ್ದಾನೆ. ಅವನು ವಾಪಸ್ ಬರುವ ದಿನದವರೆಗೂ ಅತ್ತೆ ಮನೆಯಲ್ಲಿ ರಶ್ಮಿ ಕಾಟ ಅನುಭವಿಸಬೇಕಾಗುತ್ತದೆ. ಸೀನ ಹಾಗೂ ಅವನ ತಾಯಿ ಇಬ್ಬರೂ ಸೇರಿಕೊಂಡು ತೊಂದರೆ ಕೊಡುತ್ತಿದ್ದಾರೆ. ಪಿಂಕಿಯ ತಂದೆ ಮನೆ ಬಾಗಿಲಿಗೆ ಬಂದಾಗ ಅವರನ್ನು ಅವಮಾನಿಸಿ ರಶ್ಮಿ ಕಳಿಸಿದ್ದಾಳೆ. ಆ ಕಾರಣಕ್ಕೆ ಇನ್ನಷ್ಟು ಕೋಪ ಬಂದಿದೆ. ಲೀಲಾ, ರಶ್ಮಿಯನ್ನು ತುಂಬಾ ದ್ವೇಷ ಮಾಡುತ್ತಾಳೆ. ರಶ್ಮಿ ಪಕ್ಕದ ಮನೆಯವಳು ಎಂದಾಗ ತುಂಬಾ ಪ್ರೀತಿ ಮಾಡುತ್ತಿದ್ದವಳು ಈಗ ಅವಳು ತನ್ನದೇ ಸೊಸೆ ಎಂದ ತಕ್ಷಣ ಬದಲಾಗಿದ್ದಾಳೆ. ತನ್ನ ಮಗನ ಬಾಳನ್ನು ಹಾಳು ಮಾಡಿದ್ದಾಳೆ ಎಂದು ಲೀಲಾ ಅಂದುಕೊಂಡಿದ್ದಾಳೆ.

ಅದರಲ್ಲೂ ಮಾದಪ್ಪಣ್ಣ ಇದ್ದರೆ ಮಾತ್ರ ರಶ್ಮಿ ಆ ಮನೆಯಲ್ಲಿ ಸುಖವಾಗಿರಲು ಸಾಧ್ಯ ಎಂದು ಮತ್ತೆ ಸಾಬೀತಾಗಿದೆ. ಸೀನ ಕೂಡ ರಶ್ಮಿಯ ಕಾಳಜಿ ಮಾಡುತ್ತಿಲ್ಲ. ಸೀನ ಮತ್ತು ಲೀಲಾ ಊಟ ಮಾಡಿಕೊಂಡು ಕುಳಿತಿರುತ್ತಾರೆ. ಆದರೆ ರಶ್ಮಿಗೆ ಈ ವಿಚಾರ ಗೊತ್ತಿರುವುದಿಲ್ಲ. ನಾನು ತಟ್ಟೆ ಹಾಕ್ತೀನಿ ಎಲ್ಲರೂ ...