ಭಾರತ, ಮಾರ್ಚ್ 29 -- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತನ್ನ ಪ್ರೀತಿಯನ್ನು ಶಿವು ಮಾವನ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತಾಗಿದೆ. ಆದರೆ, ಶಿವುಗೆ ಮಾತ್ರ ಗೊತ್ತಾಗಿಲ್ಲ. ಮನೆಯಲ್ಲಿರುವ ಎಲ್ಲ ತಂಗಿಯರೂ ಸಹ ಪಾರುಗೆ ಸಹಾಯ ಮಾಡುತ್ತಿದ್ದಾರೆ. ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಹಿಂದು, ಮುಂದು ಆಲೋಚಿಸುತ್ತಿದ್ದ ಪಾರುಗೆ ಅವರೇ ಸಹಾಯ ಮಾಡಿದ್ದಾರೆ. ನೀನು ಧೈರ್ಯವಾಗಿ ನಿನ್ನ ಪ್ರೀತಿಯನ್ನು ಅಣ್ಣನ ಬಳಿ ಹೇಳಿಕೊ ಎಂದು ಹೇಳಿದ್ಧಾರೆ. ಅದಕ್ಕೆ ತಕ್ಕಂತೆ ಕೆಲವು ತಯಾರಿಯನ್ನೂ ಮಾಡಿದ್ದಾರೆ.

ಪಾರು, ಶಿವು ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುವ ಸಂದರ್ಭ ಉತ್ತಮವಾಗಿರಲಿ. ಅವರಿಬ್ಬರು ಮಾತಾಡಿಕೊಳ್ಳುವಾಗ ಯಾರೂ ಅವರನ್ನು ಡಿಸ್ಟರ್ಬ್ ಮಾಡದಿರಲಿ ಎಂದು ಆಲೋಚಿಸಿ ಒಂದು ಕಲ್ಲು ಗುಡ್ಡದ ಮೇಲೆ ಅವರಿಬ್ಬರಿಗಾಗಿ ಒಂದು ಹೊಸ ವಾತಾವರಣ ನಿರ್ಮಾಣ ಮಾಡಿರುತ್ತಾರೆ. ಅಣ್ಣಯ್ಯನ ತಂಗಿಯರೂ ಅಷ್ಟೇ, ಅಣ್ಣಯ್ಯನಿಗೆ ಖುಷಿ ಆಗುತ್ತದೆ ಎಂದಾದರೆ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಈ ಬಾರಿಯೂ ಹಾಗೇ ಅಣ್ಣನ ಜೀವನ ಸ...