ಭಾರತ, ಮಾರ್ಚ್ 23 -- ಅಣ್ಣಯ್ಯ ಧಾರಾವಾಹಿಯಲ್ಲಿ ಸೀನ ಹಾಗೂ ಲೀಲಾ ಇಬ್ಬರೂ ಪಿಂಕಿಯನ್ನು ನೋಡಿ ಗಾಬರಿಯಾಗಿದ್ದಾರೆ. ಲೀಲಾಗೆ ಪಿಂಕಿಯನ್ನು ತನ್ನ ಸೊಸೆಯಾಗಿಸಿಕೊಳ್ಳಬೇಕು ಎಂಬ ಮನಸಿತ್ತು. ಆದರೆ ಅನಿವಾರ್ಯ ಕಾರಣದಿಂದಾಗಿ ರಶ್ಮಿಯನ್ನು ತನ್ನ ಸೊಸೆ ಮಾಡಿಕೊಳ್ಳಬೇಕಾಗಿ ಬಂತು. ಆದರೆ, ಈ ವಿಚಾರದಿಂದ ಸೀನ ಹಾಗೂ ಲೀಲಾ ಇಬ್ಬರೂ ಸಾಕಷ್ಟು ನೊಂದಿದ್ದಾರೆ. ಪಿಂಕಿ ಕೂಡ ನೊಂದಿದ್ದಾಳೆ. ಆದರೆ, ಸತ್ಯ ಹೇಳಿ ಎಲ್ಲವನ್ನೂ ಸರಿ ಮಾಡಿಕೊಳ್ಳಬಹುದು ಎಂಬ ಸೂಚನೆ ಸಿಗುತ್ತಿಲ್ಲ. ಸತ್ಯವನ್ನು ರಶ್ಮಿ ಹಾಗೂ ಮಾದಪ್ಪಣ್ಣನ ಮುಂದೆ ಹೇಳುವ ಧೈರ್ಯ ಲೀಲಾ ಮತ್ತು ಸೀನನಿಗೂ ಇಲ್ಲ. ಪಿಂಕಿಯೂ ಈ ಸತ್ಯ ಹೇಳಲು ಮುಂದಾಗಿಲ್ಲ.

ಒಂದು ದಿನ ಹಾಗೇ ಎಲ್ಲರೂ ಮನೆಯಲ್ಲಿರುವ ಸಂದರ್ಭದಲ್ಲೇ ಪಿಂಕಿ ಧೈರ್ಯ ಮಾಡಿ ಸೀನನ ಮನೆಗೆ ಬರುತ್ತಾಳೆ. ಮನೆ ಬಾಗಿಲಿನಲ್ಲಿ ನಿಂತು ಅನುಮಾನದಿಂದ ಒಳಗಡೆ ಬರಲೋ? ಬೇಡವೋ ಎನ್ನುವಂತೆ ನೋಡುತ್ತಾ ಇರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ರಶ್ಮಿ, ಪಿಂಕಿಯನ್ನು ಕಂಡು "ಬಾ ಪಿಂಕಿ" ಎಂದು ಕರೆಯುತ್ತಾಳೆ. ಅವಳು ಕರೆದ ತಕ್ಷಣ ಮುಜುಗರ ಆಗುತ್...