ಭಾರತ, ಏಪ್ರಿಲ್ 9 -- Anchor Anushree Marriage: ಸೆಲೆಬ್ರಿಟಿಗಳ ಮದುವೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಗಾಸಿಪ್‌ ಇರುವುದು ಸಹಜ. ಕನ್ನಡದ ಸುಂದರ ನಿರೂಪಕಿ ಅನುಶ್ರೀ ಮದುವೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಥರೇವಾರಿ ವದಂತಿ ಹರಿದಾಡುತ್ತಿತ್ತು. ಈ ಹಿಂದೆ ತನ್ನ ಮದುವೆ ಕುರಿತಾದ ಪ್ರಶ್ನೆಗೆ ಅನುಶ್ರೀ ಹಾರಿಕೆಯ ಉತ್ತರ ನೀಡುತ್ತಿದ್ದರು. ಆದರೆ, ಇದೀಗ ತನ್ನ ಮದುವೆ ಕುರಿತು ಖಚಿತಗೊಳಿಸಿದ್ದಾರೆ. ಈ ವರ್ಷವೇ ಮದುವೆಯಾಗ್ತೀನಿ ಎಂದಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಲೈವ್‌ಗೆ ಆಗಮಿಸಿದ ಅನುಶ್ರೀಗೆ ನಟ ನಾಗಭೂಷಣ್‌ ಮತ್ತು ನಟಿ ಮಲೈಕಾ ವಸುಪಾಲ್‌ "ಮದುವೆ" ಕುರಿತು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಅನುಶ್ರೀ ಉತ್ತರಿಸಿದ್ದಾರೆ. ಜತೆಗೆ, ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದೂ ಹೇಳಿದ್ದಾರೆ.

ಲೈವ್‌ನಲ್ಲಿ ಅನುಶ್ರೀಯವರು "ನೀವು ಹೇಳಿ, ನಿಮ್‌ ಹುಡುಗ ಹೇಗಿರಬೇಕು?" ಎಂದು ಕೇಳಿದ್ದಾರೆ. ನಾಗಭೂಷಣ್‌ ಅವರು "ಕೇಳ್ರಿ ಇಲ್ಲಿ. ನನಗೂ ಒಬ್ಬ ಗೆಳೆಯ ಬೇಕು. ಅವನು ಟೈಮಿಗೆ ಮುಂಚೆ ಬಂದು ಕಾಯಬೇಕು" ಎಂದು ಹೇಳಿದ್ದಾರ...