Bengaluru, ಜನವರಿ 26 -- Anant Nag Movies: ಕನ್ನಡದ ಹೆಮ್ಮೆಯ ನಟ ಅನಂತ್‍ ನಾಗ್‍ ಅವರಿಗೆ ಕೊನೆಗೂ ಶನಿವಾರ ರಾತ್ರಿ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದೆ. ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕೆಂಬ ಕೂಗು ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಅದಕ್ಕೂ ದೊಡ್ಡ ಪ್ರಶಸ್ತಿ ಅವರಿಗೆ ಸಿಕ್ಕಿದೆ.

ಅನಂತ್ ‍ನಾಗ್‍ ಬರೀ ಕನ್ನಡದ ನಟರಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದ ನಟ. ಅದಕ್ಕೆ ಸರಿಯಾಗಿ ಅವರು ಕನ್ನಡವಲ್ಲದೆ ತೆಲುಗು, ಹಿಂದಿ, ಮಲಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ನಟಿಸಿದ್ದಾರೆ. ಬರೀ ಕಮರ್ಷಿಯಲ್‍ ಚಿತ್ರಗಳಷ್ಟೇ ಅಲ್ಲ, ಕಲಾತ್ಮಕ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ನಾಯಕನಾಗುವುದರ ಜೊತೆಗೆ ಪೋಷಕ ಪಾತ್ರಗಳಲ್ಲೂ ಗೆದ್ದಿದ್ದಾರೆ. ಅನಂತ್‍ ನಾಗ್ ಅವರು ವರ್ಸೈಟಲ್‍ ಅನಿಸಿಕೊಳ್ಳುವುದಕ್ಕೆ ಹಲವು ಚಿತ್ರಗಳು ಮತ್ತು ಪಾತ್ರಗಳು ಉದಾಹರಣೆಯಾಗಿ ಸಿಗುತ್ತವೆ. ಆ ಪೈಕಿ ದಿ ಬೆಸ್ಟ್ ಎನ್ನುವಂತಹ 10 ಚಿತ್ರಗಳನ್ನು ನೀವು ನೋಡಲೇಬೇಕು.

ಅನಂತ್‍ ನಾಗ್‍ ಅವರು ಕನ್ನಡ ಚಿತ್ರರಂಗಕ್ಕ...