ಭಾರತ, ಮಾರ್ಚ್ 25 -- Amy Jackson Baby Boy: ಆಮಿ ಜಾಕ್ಸನ್ ಮತ್ತು ಎಡ್ ವೆಸ್ಟ್‌ವಿಕ್‌ ದಂಪತಿಗೆ ಗಂಡು ಮಗು ಜನಿಸಿದೆ. ಭಾರತದ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ಬ್ರಿಟನ್‌ನ ನಟಿ ಆಮಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾರೆ. ಸೋಮವಾರ ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನವಜಾತ ಶಿಶುವಿನೊಂದಿಗೆ ತಮ್ಮ ಚಿತ್ರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಹೆಸರು ಕೂಡ ಬಹಿರಂಗಪಡಿಸಿದ್ದಾರೆ.

ಸೋಮವಾರ ಸಂಜೆ ಎಡ್ ಮತ್ತು ಆಮಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮ್ಮ ಮಗನೊಂದಿಗೆ ಇರುವ ಮೂರು ಕಪ್ಪು-ಬಿಳುಪು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ಆಸ್ಕರ್ ಅಲೆಕ್ಸಾಂಡರ್ ವೆಸ್ಟ್‌ವಿಕ್‌" ಎಂದು ಮಗುವಿಗೆ ಹೆಸರಿಟ್ಟಿದ್ದಾರೆ. "ಜಗತ್ತಿಗೆ ಸ್ವಾಗತ, ಗಂಡು ಮಗು. ಆಸ್ಕರ್ ಅಲೆಕ್ಸಾಂಡರ್ ವೆಸ್ಟ್‌ವಿಕ್‌" ಎಂದು ಕ್ಯಾಪ್ಷನ್‌ ಬರೆದಿದ್ದಾರೆ.

ಈ ಫೋಟೋಗಳಲ್ಲಿ ಮುದ್ದಾದ ಪುಟ್ಟ ಮಗುವಿದೆ. ಆಮಿ ಮಗುವಿಗೆ ಹೂಮುತ್ತು ನೀಡುವ ಫೋಟೋ ಹಂಚಿಕೊಂಡಿದ್ದಾರೆ. ಮತ್ತ...