ಭಾರತ, ಏಪ್ರಿಲ್ 12 -- Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಭಾಗ್ಯಮ್ಮನಿಗೆ ನೆನಪುಗಳು ಮರುಕಳಿಸಿವೆ. ಶಕುಂತಲಾದೇವಿ ಗ್ಯಾಂಗ್‌ ಅನ್ನು ಹೆಡೆಮುರಿಕಟ್ಟಲು ಭಾಗ್ಯಮ್ಮಳೇ ಬೆಸ್ಟ್‌ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯು ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಸಾಕಷ್ಟು ವಿಷಯಗಳು ಬೆಳಕಿಗೆ ಬಂದಿವೆ. ತನ್ನ ಮಗಳನ್ನು ನೋಡಿ ಭಾಗ್ಯಮ್ಮ ಕಣ್ಣೀರಾಗಿದ್ದಾಳೆ. ತನಗೊಬ್ಬಳು ಮೊಮ್ಮಗಳು ಇರುವುದನ್ನು ಕೇಳಿ ಖುಷಿಪಟ್ಟಿದ್ದಾಳೆ. ಇದೇ ಮನೆಯಲ್ಲಿ ಮಗ ಗುಂಡು ಕೂಡ ಇದ್ದಾನೆ ಎಂದು ಕೇಳಿ ಪುಳಕಿತಗೊಂಡಿದ್ದಾಳೆ.

ಇದೆಲ್ಲ ಆಗಿರುವುದು ಗೌತಮ್‌ ಹಚ್ಚಿರುವ ಪಟಾಕಿಯಿಂದ. ಕ್ರಿಕೆಟ್‌ ಮ್ಯಾಚ್‌ ನೋಡುತ್ತ ಗೌತಮ್‌ ಖುಷಿಯಾಗಿದ್ದಾರೆ. ಮ್ಯಾಚ್‌ ಗೆದ್ದ ಖುಷಿಗೆ ಏನಾದರೂ ಮಾಡಬೇಕು ಎಂದೆನಿಸಿದೆ. ಸ್ಟಾಕ್‌ನಲ್ಲಿರುವ ಪಟಾಕಿಯನ್ನು ತೆಗೆದುಕೊಂಡು ಹಚ್ಚಿದ್ದಾರೆ. ಪಟಾಕಿ ಡಮ್‌ಡುಂ ಎಂದು ಸಿಡಿದಿದೆ. ಈ ಸದ್ದಿಗೆ ಕೋಣೆಯಲ್ಲಿ ಮಲಗಿದ್ದ ಭಾಗ್ಯಮ್ಮಳಿಗೆ ಎಚ್ಚರವಾಗಿದೆ. ಆಕೆ ಬೆಚ್ಚಿ ಬಿದ್ದಿದ್ದ...