ಭಾರತ, ಏಪ್ರಿಲ್ 10 -- Amruthadhaare Serial: ಜೀವನ್‌ ಇನ್ನೂ ಮನೆಗೆ ಬಂದಿಲ್ಲ ಎಂದು ಮಂದಾಕಿನಿ ಆತಂಕದಲ್ಲಿದ್ದಾರೆ. ಸದಾಶಿವ ಕೂಡ ಚಿಂತೆಯಲ್ಲಿದ್ದಾರೆ. "ಬರ್ತಾರೆ, ಟೆನ್ಷನ್‌ ಮಾಡೋದು ಬೇಡ" ಎಂದು ಮಹಿಮಾ ಹೇಳುತ್ತಾಳೆ. "ನಾವು ಬೈದದ್ದು ಸರಿ ಇದೆ. ಅವನಿಗೆ ಬುದ್ಧಿ ಹೇಳೋದು ನಮ್ಮ ಕರ್ತವ್ಯ" ಎಂದು ಸದಾಶಿವ ಹೇಳುತ್ತಾನೆ. ಆಗ ಕಾಲಿಂಗ್‌ ಬೆಲ್‌ ಸದ್ದಾಗುತ್ತದೆ. ಹೊರಗಡೆ ಜೀವ ಇದ್ದಾನೆ. ಟೈಟ್‌ ಆಗಿದ್ದಾನೆ. ಮಹಿಮಾ ಬಾಗಿಲು ತೆರೆಯುತ್ತಾಳೆ. "ಬಾಗಿಲು ತೆಗೆದದ್ದಕ್ಕೆ ಥ್ಯಾಂಕ್ಸ್‌. ಇದು ನನ್ನ ಮನೆ. ಯಾವಾಗ ಬೇಕಾದ್ರೂ ಬರ್ತಿನಿ. ಯಾವಾಗ ಬೇಕಾದ್ರೂ ಹೋಗ್ತಿನಿ" ಎಂದೆಲ್ಲ ತೊದಲುತ್ತಾ ಮಾತನಾಡುತ್ತಾನೆ. "ಓಕೆ ಗುಡ್‌ನೈಟ್‌" ಎಂದು ಹೋಗಲು ರೆಡಿಯಾದಗ ಸದಾಶಿವ "ನಿಂತ್ಕೋ" ಎನ್ನುತ್ತಾರೆ. "ಒಂದು ಇಡೀ ದಿನ ಮನೆಯಲ್ಲಿ ಹೊರಗಡೆ ಇದ್ಯಾ? ಕುಡಿಯೋದು ಕಲಿತಿದ್ದೀ. ಈಗಲೂ ಕುಡಿದಿರುವೆ. ಯಾಕೋ ಹೀಗೆ ಹೊಟ್ಟೆ ಉರಿಸ್ತಿಯಾ?" ಎಂದು ಸದಾಶಿವ ಬೇಸರದಲ್ಲಿ ಹೇಳುತ್ತಾರೆ.

"ನನಗೆ ನೀವು ಮೇಸ್ಟ್ರು ಅಂತ ಗೊತ್ತು. ಭಾಷಣ ಮಾಡಬೇಡಿ" ಎಂದು ಜೀ...