ಭಾರತ, ಮಾರ್ಚ್ 13 -- Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಮತ್ತು ಮಧುರಾ ಮಾಡಿದ ನಾಟಕ ಎಲ್ಲರನ್ನು ಅಚ್ಚರಿಗೆ ದೂಡಿದೆ. ವಿಶೇಷವಾಗಿ ಶತ್ರುಪಡೆಗಳು ಆತಂಕಗೊಂಡರೆ, ಗೌತಮ್‌ ಆಪ್ತರು ಖುಷಿಪಟ್ಟಿದ್ದಾರೆ. "ಮಗು ಆಗೋದಿಲ್ಲ ಎಂದು ಎರಡನೇ ಮದುವೆ ಮಾಡುವುದು ಎಷ್ಟು ಸರಿ. ಹೆಣ್ಣಿನಲ್ಲಿ ಸಮಸ್ಯೆ ಇದೆ ಎಂದು ಗಂಡಿಗೆ ಎರಡನೇ ಮದುವೆ ಮಾಡ್ತಿರಿ. ಅದೇ ರೀತಿ ಗಂಡಿಗೆ ಸಮಸ್ಯೆ ಇದ್ದರೆ ಸೊಸೆಗೆ ಎರಡನೇ ಮದುವೆ ಮಾಡ್ತೀರಾ?" ಎಂದು ಗೌತಮ್‌ ಪ್ರಶ್ನಿಸುತ್ತಾರೆ. ಅದಕ್ಕೆ ಶಕುಂತಲಾದೇವಿ, "ಅದೆಲ್ಲ ಸರಿ, ಆದರೆ, ಹಸಮಣೆ ತನಕ ಬಂದ ಮಧುರಾಳ ಕಥೆ ಏನು. ಆಕೆಗೆ ನೀನು ಯಾಕೆ ಈ ರೀತಿ ಮೋಸ ಮಾಡಿದೆ" ಎಂದು ಶಕುಂತಲಾದೇವಿ ಹೇಳುತ್ತಾರೆ. ಅವರಿಗೆ ಮಧುರಾಳ ಜತೆ ಗೌತಮ್‌ನ ಮದುವೆ ಮಾಡಿಸಲು ಇದು ಕೊನೆಯ ಅಸ್ತ್ರ.

ಈ ಸಮಯದಲ್ಲಿ ಮಧುರಾ ಹಸೆಮಣೆಯಿಂದ ಎದ್ದು ಬರುತ್ತಾಳೆ. "ಕ್ಷಮಿಸಿ, ನನಗೆ ಇದರಿಂದ ಏನೂ ಬೇಸರವಿಲ್ಲ. ಏಕೆಂದರೆ, ಇದು ನಾನು ಮತ್ತು ಗೌತಮ್‌ ಮೊದಲೇ ಮಾತನಾಡಿಕೊಂಡಂತೆ ನಡೆದ ಮದು...