Bangalore, ಮಾರ್ಚ್ 17 -- Amruthadhaare serial Yesterday Episode: ಭೂಪತಿ ಮತ್ತು ಜೈದೇವ್‌ ಮಾತನಾಡುತ್ತಿದ್ದಾರೆ. "ಬಯಸಿ ಬಯಸಿ ಮಗುನಾ ಪಡೆದುಕೊಳ್ಳುತ್ತಿದ್ದಾರಲ್ವ? ಮಗುನಾ ಕಳೆದುಕೊಳ್ಳೋದು ಎಷ್ಟು ನೋವು ಕೊಡುತ್ತದೆ ಎಂದು ಗೌತಮ್‌ಗೂ ಗೊತ್ತಾಗಬೇಕು" ಎಂದು ಭೂಪತಿ ಹೇಳುತ್ತಾನೆ. ಆತನಿಗೆ ತನ್ನ ಕುಟುಂಬವನ್ನು ಕಳೆದುಕೊಂಡ ರೋಷ ಮಡುಗಟ್ಟಿದೆ. "ನೋ ಅಂಕಲ್‌, ಆ ಮಗು ನನ್ನ ಬೇಟೆ, ಅದನ್ನು ನಾನು ಮುಗಿಸುವೆ" ಎಂದು ಜೈದೇವ್‌ ಹೇಳುತ್ತಾನೆ. "ನಾವಿದನು ಪಂದ್ಯದಂತೆ ನೋಡುವ, ನಾನಾ, ನೀನಾ" ಎಂದು ಭೂಪತಿ ಹೇಳುತ್ತಾನೆ.

ಗೌತಮ್‌ ಮತ್ತು ಆನಂದ್‌ ಮಾತನಾಡುತ್ತಿದ್ದಾರೆ. ಗೌತಮ್‌ ಆನಂದ್‌ನನ್ನು ಕರೆದುಕೊಂಡು ಬಂದಿದ್ದಾನೆ. "ಶಾಪಿಂಗ್‌ ಮಾಡಿಕೊಂಡು ಬರೋಣ" ಎನ್ನುತ್ತಾರೆ ಗೌತಮ್‌. "ನಮ್ಮ ಕನಸಿನ ಕೂಸು ಹೊತ್ತುಕೊಂಡಿದ್ದಾರಲ್ವ? ಅವರಿಗೆ ಒಂದು ಗಿಫ್ಟ್‌ ಕೊಡೋಣ" ಎಂದಾಗ ಆನಂದ್‌ ಕಾಮಿಡಿ ಮಾಡುತ್ತಾನೆ. ಇನ್ನೊಂದೆಡೆ ಮಂದಾಕಿನಿ ದೊಡ್ಡ ಲಿಸ್ಟ್‌ ಕೊಡ್ತಾರೆ. ಸದಾಶಿವ ಅಚ್ಚರಿಗೊಳ್ಳುತ್ತಾರೆ. ಮತ್ತೆ ಮತ್ತೆ ಲಿಸ್ಟ್‌ ಕೊಡುವ ಕುರ...