ಭಾರತ, ಮಾರ್ಚ್ 15 -- Amruthadhaare serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ ಈಗ ದೊಡ್ಡ ಮಳೆ ಬಂದು ನಿಂತಂತೆ ಶಾಂತವಾಗಿದೆ. ಕಳೆದ ಹಲವು ಸಂಚಿಕೆಗಳಿಂದ ಈ ಸೀರಿಯಲ್‌ನಲ್ಲಿ ಭೂಮಿಕಾಳ ಕಣ್ಣೀರಧಾರೆ, ಗೌತಮ್‌ ಎರಡನೇ ಮದುವೆ, ಮಧುರಾಳ ಆಗಮನ, ಶಕುಂತಲಾದೇವಿಯ ಕುತಂತ್ರಗಳೇ ತುಂಬಿದ್ದವು. ಈಗ ಈ ಎಲ್ಲಾ ಸಮಸ್ಯೆಗಳು ಬಗೆಹರಿದಿವೆ. ಈಗ ಭೂಮಿಕಾಳಿಗೆ ಹುಟ್ಟಲಿರುವ ಮಗುವಿನ ಕನವರಿಕೆಯಲ್ಲಿ ಗೌತಮ್‌ ದಿವಾನ್‌ ಕುಟುಂಬವಿದೆ. ಸಹಜವಾಗಿ ಗೌತಮ್‌ ಟೀಮ್‌ ಮಗುವಿನ ಕುರಿತು ಕನಸು ಕಾಣುತ್ತಿದೆ. ಶಕುಂತಲಾ ಟೀಮ್‌ ಈ ಮಗು ಹುಟ್ಟಬಾರದು ಎಂದು ಮಸಲತ್ತು ಮಾಡುವ ಕುರಿತು ಯೋಚಿಸುತ್ತಿದೆ. ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಕುರಿತು ಇಂದು ಬಿಡುಗಡೆ ಮಾಡಿದ ಪ್ರೊಮೊದಲ್ಲಿ ಹುಟ್ಟಲಿರುವ "ಮಗನ" ಕುರಿತು ಚರ್ಚೆ ನಡೆಯುತ್ತಿದೆ.

ಗೌತಮ್‌ ಭೂಮಿಕಾಳ ಕಾಳಜಿಗೆ ಎಲ್ಲಾ ವ್ಯವಸ್ಥೆ ಮಾಡಿದ್ದಾನೆ. ಭೂಮಿಕಾ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ಅಡುಗೆಯವರಿಗೆ ಸೂಚನೆ ನೀಡಿದ್ದಾರೆ. ಇದನ್ನೆಲ್ಲ ಭೂಮಿಕಾ ಗಮ...