Bangalore, ಏಪ್ರಿಲ್ 9 -- Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಕೋಪದಿಂದ ಭೂಪತಿ ಮನೆಗೆ ಹೋಗಿದ್ದಾಳೆ. ನಮ್ಮ ಮನೆಯವರ ಸುದ್ದಿಗೆ ಹೋಗಬೇಡಿ ಎಂದು ಭೂಪತಿಗೆ ಬೈದಿದ್ದಾಳೆ. ತನ್ನ ಮಗಳ ವಯಸ್ಸಿನ ಹೆಣ್ಣೊಬ್ಬಳು ಈ ರೀತಿ ಮಾತನಾಡಿದ್ದು, ಭೂಪತಿಗೆ ಇಷ್ಟವಾಗಿಲ್ಲ.

ಮಲ್ಲಿ ಭೂಪತಿಗೆ ಅವಾಜ್‌ ಹಾಕಿದ ವಿಚಾರ ಗೌತಮ್‌ಗೆ ತಿಳಿದಾಗ ಬೇಸರಗೊಂಡಿದ್ದಾರೆ. ಮಲ್ಲಿ ಮತ್ತು ಭೂಪತಿ ಸಂಬಂಧ ಗೌತಮ್‌ಗೆ ತಿಳಿದಿದೆ. ಭೂಪತಿ ಮಲ್ಲಿಗೆ ತಂದೆಯಾಗಬೇಕು ಎಂದು ಮಲ್ಲಿಯ ಅಜ್ಜ ಹೇಳಿದ್ದರು. ಇದಾದ ಬಳಿಕ ಭೂಪತಿ ವಿಚಾರದಲ್ಲಿ ಗೌತಮ್‌ ಸಾಫ್ಟ್‌ ಆಗಿದ್ದಾರೆ.

"ಮನೆಗೆ ಬಂದು ಬಾಯಿಗೆ ಬಂದಂತೆ ಮಾತನಾಡಬೇಡ. ನಿಮ್ಮ ಮನೆಯವರಿಗೂ ನಮಗೂ ವೈರತ್ವ ಇರೋದು ನಿಜ. ಆದರೆ, ಈಗ ಅಂದ್ಯಲ್ಲ, ಕರೆಂಟ್‌, ಆಕ್ಸಿಡೆಂಟ್‌ ಅದು ಇದು ಅಂತ.. ಅದೆಲ್ಲ ನಾನು ಮಾಡಿಲ್ಲ. ಅದಕ್ಕೂ ನನಗೂ ಸಂಬಂಧ ಇಲ್ಲ. ಹೊಡೆದ್ರೆ ಹೇಳಿ ಹೊಡೆಯುವವನು ನಾನು. ಇಂತಹ ಚಿಲ್ರೆ ಕೆಲಸಗಳಿಗೆ ನಾನು ಕೈ ಹಾಕೋದಿಲ್ಲ. ತಪ್ಪು ತಿಳಿದುಕೊಂಡಿದ್ಯಾ ನೀನು" ಎಂದು ಭೂಪತ...