ಭಾರತ, ಫೆಬ್ರವರಿ 4 -- ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಶಕುಂತಲಾದೇವಿಯೇ ಭಾಗ್ಯಮ್ಮನಿಗೆ ಊಟ ತಿನ್ನಿಸುತ್ತಾಳೆ. ಆದರೆ, ಶಕುಂತಲಾದೇವಿಯನ್ನು ನೋಡಿದಾಗ ಭಾಗ್ಯಮ್ಮನಿಗೆ ಭಯ ಇರುತ್ತದೆ. ಶಕುಂತಲಾ ದೇವಿ ಬಾಯಿಗೆ ತುತ್ತು ನೀಡಲು ಬಂದಾಗ ಭಾಗ್ಯಮ್ಮ ದುರುಗಟ್ಟಿ ನೋಡುತ್ತಾಳೆ. ಇವಳಿಗೆ ಹಳೆಯದು ನೆನಪಾಯ್ತ ಎಂಬ ಆತಂಕ ಶಕುಂತಲಾದೇವಿಯನ್ನು ಕಾಡುತ್ತದೆ. ಆ ಸಮಯದಲ್ಲಿ ಅನ್ನವನ್ನು ಶಕುಂತಲಾದೇವಿಯ ಮೇಲೆ ಉಗಿಯುತ್ತಾರೆ ಭಾಗ್ಯಮ್ಮ. "ಅವರಿಗೆ ಗೊತ್ತಾಗಿಲ್ಲ" ಎಂದು ಸುಧಾ ಪೇಚಾಡುತ್ತ ಇದ್ದಾಳೆ. ಶಕುಂತಲಾದೇವಿಗೆ ಟೆನ್ಷನ್‌ ಆಗುವ ಸಮಯವಿದು. ಭಾಗ್ಯಮ್ಮನ ಸಾಯಿಸುವ ಕುರಿತು ಶಕುಂತಲಾ ಯೋಚನೆ ಗಟ್ಟಿಯಾಗುತ್ತದೆ.

ಇನ್ನೊಂದೆಡೆ ಗೌತಮ್‌ ಮತ್ತು ಭೂಮಿಕಾ ಲಹರಿ ನಡೆಯುತ್ತಿದೆ. ಇಷ್ಟು ದಿನ ಇಬ್ಬರು ಒಬ್ಬರನೊಬ್ಬರು ಮಿಸ್‌ ಮಾಡಿಕೊಂಡಿದ್ದರು. ಈಗ ಪ್ರೀತಿಯ ಮಾತುಗಳು ಅಮೃತಧಾರೆಯಾಗಿದೆ. ಇದೇ ಸಮಯದಲ್ಲಿ ಭೂಪತಿ ಮತ್ತು ಜೀವನ ಕುರಿತೂ ಚರ್ಚೆಯಾಗುತ್ತದೆ. ಇನ್ನೊಂದೆಡೆ ಭೂಮಿಕಾ ಮತ್ತು ಗೌತಮ್‌ನ ನಾ...