Bangalore, ಮಾರ್ಚ್ 14 -- Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ಸಂಭ್ರಮ ಮನೆ ಮಾಡಿದೆ. ಗೌತಮ್‌ ಭೂಮಿಕಾಳಿಗೆ ತಾಳಿ ಕಟ್ಟಿದ ಬಳಿಕ ಶಕುಂತಲಾ ಟೀಮ್‌ ಹೊರತುಪಡಿಸಿ ಎಲ್ಲರ ಮುಖದಲ್ಲಿ ಹಬ್ಬದ ವಾತಾವರಣ ಇದೆ. "ಈ ವಿಷಯದಲ್ಲಿ ನಮ್ಮೆಲ್ಲರ ಕಣ್ಣು ತೆರೆಸಿಬಿಟ್ಟೆ ಕಣೋ" ಎಂದು ಅಜ್ಜಿ ಹೇಳುತ್ತಾರೆ. "ವಯಸ್ಸಿನಲ್ಲಿ ಚಿಕ್ಕವನಾದರೂ ಎಲ್ಲರೂ ನಿನಗೆ ಕೈ ಮುಗಿಯುವಂತೆ ಮಾಡಿದೆ. ತುಂಬಾ ಎತ್ತರದ ವ್ಯಕ್ತಿತ್ವ ನಿನ್ನದು. ನೀನು ನಮ್ಮ ವಂಶದಲ್ಲಿ ಹುಟ್ಟಿದೆಯಲ್ವ ಅದೇ ಹೆಮ್ಮೆ ಕಣೋ. ತುಂಬಾ ಒಳ್ಳೆ ಕೆಲಸ ಮಾಡಿದೆ" ಎಂದು ಅಜ್ಜಮ್ಮ ಗುಣಗಾನ ಮುಂದುವರೆಸುತ್ತಾರೆ. "ನೀನು ಭೂಮಿಕಾಳನ್ನು ಎಷ್ಟು ಪ್ರೀತಿಸ್ತಿ ಅಂತ ಇಡೀ ಜಗತ್ತಿಗೆ ಇವತ್ತು ಸಾಬೀತಾಯಿತು. ಪರಿಶುದ್ಧ ಪ್ರೀತಿಗೆ, ಗಂಡ ಹೆಂಡತಿ ಹೇಗೆ ಇರಬೇಕು ಎನ್ನುವುದಕ್ಕೆ ನೀನೇ ಉದಾಹರಣೆ" ಎಂದು ಅಜ್ಜಮ್ಮ ಹೇಳುತ್ತಾರೆ. "ಹೌದು ಅಜ್ಜಿ" ಎಂದು ಆನಂದ್‌ ಹೇಳುತ್ತಾರೆ. ಬಳಿಕ ಆನಂದ್‌ ತನ್ನ ಗೆಳೆಯನ ಗುಣಗಾನ ಮಾಡುತ್ತಾನೆ.

ರೋಮಿಯೋ ಜ್ಯೂಲಿಯೆಟ್‌ ಹಳೆಯದಾಯ್ತ...