Bengaluru, ಫೆಬ್ರವರಿ 27 -- ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಶಕುಂತಲಾದೇವಿ ತನ್ನ ಮುಂದಿನ ಯೋಜನೆಯ ಕುರಿತು ತನ್ನ ಕ್ರಿಮಿನಲ್‌ ಗ್ಯಾಂಗ್‌ಗೆ ತಿಳಿಸಿದ್ದಾರೆ. ಅಂದರೆ, ಜೈದೇವ್‌ ಮತ್ತು ಲಕ್ಷ್ಮಿಕಾಂತ್‌ ಮುಂದೆ ತನ್ನ ಮುಂದಿನ ಯೋಜನೆಯ ಕುರಿತು ತಿಳಿಸಿದ್ದಾರೆ. ಈ ಪ್ರೊಮೊ ನೋಡಿ ಸೋಷಿಯಲ್‌ ಮೀಡಿಯಾದಲ್ಲಿ ಸೀರಿಯಲ್‌ ವೀಕ್ಷಕರು ನಾನಾ ಬಗೆಯ ಕಾಮೆಂಟ್‌ ಮಾಡಿದ್ದಾರೆ. ಈ ಸೀರಿಯಲ್‌ ಕೂಡ ಹಳ್ಳ ಹಿಡಿಯಿತು ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಭೂಮಿಕಾ ಕುಳಿತಿರುವಲ್ಲಿಗೆ ಶಕುಂತಲಾದೇವಿ ಆಗಮಿಸುತ್ತಾರೆ. ಆರಂಭದಲ್ಲಿ ಒಂದಿಷ್ಟು ನಾಟಕೀಯವಾಗ, ಕಾಳಜಿಯ ಮಾತುಗಳನ್ನು ಆಡುತ್ತಾರೆ. "ನನಗೆ ನಿಜಕ್ಕೂ ಬೇಜಾರಾಗಿಲ್ಲ. ರಿಯಾಲಿಟಿಯನ್ನು ಒಪ್ಪಿಕೊಳ್ಳಬೇಕಲ್ವ" ಎಂದು ಭೂಮಿಕಾ ಹೇಳುತ್ತಾರೆ. "ನೀನು ಹೇಳುವ ರಿಯಾಲಿಟಿ ನಮಗೆ ಸಂಬಂಧಪಟ್ಟಿದ್ದರೆ... ಸಮಸ್ಯೆ ಅನ್ನೋದು ನಮ್ಮಲ್ಲಿದ್ದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ" ಎಂದು ಶಕುಂತಲಾ ಹೇಳಿದ್ದರು. ಇದು ನಿನ್ನೆಯ ಕಥೆ.

"ಏನು ಹೇಳ್ತಿದ್ದೀರಾ" ಎಂದು ಭೂಮಿಕಾ ಅಚ್ಚರಿಯಿಂದ ಕೇಳ...