Bengaluru, ಮಾರ್ಚ್ 5 -- Amruthadhaare Serial: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಬಿಡುಗಡೆ ಮಾಡಿದೆ. ಗೌತಮ್‌ ಮತ್ತು ಮಧುರಾಳನ್ನು ಹತ್ತಿರವಾಗಿಸಲು ಭೂಮಿಕಾ ಪ್ಲ್ಯಾನ್‌ ಮಾಡಿದ್ದಾರೆ. ಮಧುರಾಳ ಕಾರ್‌ ಕೆಟ್ಟಿದೆ ಅವಳನ್ನು ಡ್ರಾಪ್‌ ಮಾಡಿ ಎಂದು ಭೂಮಿಕಾ ಹೇಳಿದ್ದಾರೆ. ಈ ಮೂಲಕ ಇಬ್ಬರು ಇನ್ನಷ್ಟು ಹತ್ತಿರವಾಗಲಿ ಎಂದುಕೊಂಡಿದ್ದಾರೆ. ಆದರೆ, ಏನೂ ವಿಷಯ ಗೊತ್ತಿಲ್ಲದ ಗೌತಮ್‌ ಮಧುರಾಳಿಗೆ ತನ್ನ ಕಾರಿನಲ್ಲಿ ಡ್ರಾಪ್‌ ನೀಡಿದ್ದಾರೆ. ಕಪ್ಪು ಕೋಟ್‌ ಧರಿಸಿರುವ ಗೌತಮ್‌ ಕಾರಿನಲ್ಲಿ ಆಕೆಯ ಕಾಫಿ ಶಾಪ್‌ ತನಕ ಹೋಗುತ್ತಾರೆ. "ಬನ್ನಿ ಕಾಫಿ ಕುಡಿಯೋಣ" ಎಂದು ಮಧುರಾ ಹೇಳುತ್ತಾರೆ. ಸಹಜವಾಗಿ ಕಾಫಿ ಕುಡಿಯಲು ಆ ಕಾಫಿ ಶಾಪ್‌ಗೆ ಗೌತಮ್‌ ಹೋಗುತ್ತಾರೆ. ಅಲ್ಲಿ ಮಧುರಾ ಮತ್ತು ಗೌತಮ್‌ ಮಾತನಾಡುತ್ತಾರೆ.

"ಭೂಮಿಕಾ ನಿಮಗೆ ಏನೂ ರಿಸ್ಟ್ರಿಕ್ಟ್‌ ಮಾಡೋದಿಲ್ವ?" ಎಂದು ಮಧುರಾ ಪ್ರಶ್ನಿಸುತ್ತಾರೆ.

"ನಿಮಗೆ ಹೇಗೆ ಇಷ್ಟಾನೋ ಹಾಗೇ ಇರಿ ಅಂತಾರೆ?" ಎಂದು ಗೌತಮ್‌ ದಿವಾನ್‌ ಉತ್ತರಿಸುತ್ತಾರೆ.

"ನ...