Bangalore, ಮಾರ್ಚ್ 25 -- Amruthadhaare serial Yesterday Episode: ಅಮೃತಧಾರೆಯಲ್ಲಿ ಭೂಮಿಕಾಳಿಗೆ ಬೋರ್‌ ಆಗಿದೆ. ಆ ಸಮಯದಲ್ಲಿ ಸುಧಾ ಎಲ್ಲಿಗೋ ಹೊರಡುವುದನ್ನು ನೋಡುತ್ತಾರೆ. ಎಲ್ಲಿಗೆ ಎಂದು ಕೇಳಿದಾಗ "ಲಚ್ಚಿಯನ್ನು ಸ್ಕೂಲ್‌ನಿಂದ ಕರೆದುಕೊಂಡು ಬರಲು ಹೋಗುವೆ. ಇವತ್ತು ಸ್ಕೂಲ್‌ನಲ್ಲಿ ಫಂಕ್ಷನ್‌ ಇದೆಯಂತೆ. ವ್ಯಾನ್‌ ಇಲ್ಲ. ಬೇಗ ಬಿಡ್ತಾರೆ. ಹೀಗಾಗಿ ಹೋಗುವೆ" ಎಂದು ಸುಧಾ ಹೇಳುತ್ತಾರೆ. ಅದಕ್ಕೆ ಭೂಮಿಕಾ "ನಾನು ಬರುವೆ, ನನಗೂ ಮನೆಯಲ್ಲಿ ಕುಳಿತು ಬೋರ್‌ ಆಗಿದೆ. ಗೌತಮ್‌ಗೆ ಹೇಳೋದು ಬೇಡʼ ಎಂದು ಸುಧಾಳನ್ನು ಒಪ್ಪಿಸಿ ತಾನೂ ಹೊರಡುತ್ತಾರೆ. ಹೀಗೆ ಇವರಿಬ್ಬರು ಮನೆಯ ಕಾರಿನಲ್ಲಿಯೇ ಲಚ್ಚಿಯನ್ನು ಕರೆದುಕೊಂಡು ಬರಲು ಹೋಗುತ್ತಾರೆ.

ಇನ್ನೊಂದೆಡೆ ಜೈದೇವ್‌ ತನ್ನ ಚೇಲಾಗಳಿಗೆ ಕಾಲ್‌ ಮಾಡುತ್ತಾನೆ. "ಕರೆಕ್ಟಾಗಿ ಕೇಳಿಸ್ಕೋ. ಇವತ್ತು ಸುಧಾ ಮತ್ತು ಲಚ್ಚಿ ಸ್ಕೂಲ್‌ನ ಹತ್ತಿರ ಬರುತ್ತಾರೆ. ಅವರನ್ನು ಮುಗಿಸಬೇಕು. ನಿಮಗೆ ಫೋಟೋಸ್‌ ಕಳುಹಿಸಿದ್ದೇನೆ. ಉತ್ತರಹಳ್ಳಿ ಸರಕಾರಿ ಶಾಲೆಗೆ ಮಗಳನ್ನು ಕರೆದುಕೊಂಡು ಹೋಗಲು ಬರ್ತಾರೆ....