Bengaluru, ಮಾರ್ಚ್ 20 -- Amruthadhaare Serial: ಅಮೃತಧಾರೆ ಜೀ ಕನ್ನಡದ ಟಾಪ್‌ ರೇಟೆಡ್‌ ಸೀರಿಯಲ್. ಜನಮೆಚ್ಚುಗೆ ಪಡೆದ ಈ ಧಾರಾವಾಹಿ, ತನ್ನ ಗಟ್ಟಿ ಕಥೆಯ ಮೂಲಕವೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದೆ. ಟಿಆರ್‌ಪಿಯಲ್ಲಿಯೂ ನಂಬರ್‌ 1 ಸ್ಥಾನದ ಗಡಿ ಮುಟ್ಟಿ ಬಂದಿರುವ ಈ ಸೀರಿಯಲ್‌ ಟಾಪ್‌ ಐದರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಸದ್ಯ ಸೀರಿಯಲ್‌ನಲ್ಲಿ ಗೌತಮ್‌ ದಿವಾನ್‌ ಮತ್ತು ಭೂಮಿಕೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದು ಕಡೆ, ಶತ್ರುಗಳ ತಂತ್ರವೂ ಹೆಚ್ಚಾಗುತ್ತಿದೆ. ಆದರೆ ಕಳೆದ ಎರಡು ತಿಂಗಳಿಂದ ಇದೇ ಧಾರಾವಾಹಿಯ ಪ್ರಮುಖ ಪಾತ್ರವೊಂದು ಮಿಸ್‌ ಆಗಿತ್ತು. ಅದೇ ಮಲ್ಲಿ. ಈಗ ಹೊಸ ಮಲ್ಲಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಒಂದು ಪಾತ್ರದಿಂದ ಯಾರಾದರೂ ಹಿಂದೆ ಸರಿದರೆ, ಆ ಪಾತ್ರಕ್ಕೆ ಇನ್ನೊಬ್ಬರ ಆಗಮನವಾಗುವುದು ಧಾರಾವಾಹಿಗಳಲ್ಲಿ ಸಹಜ ಪ್ರಕ್ರಿಯೆ. ಅಮೃತಧಾರೆ ಸೀರಿಯಲ್‌ನಲ್ಲಿ ಹಳ್ಳಿ ಹುಡುಗಿ ಮಲ್ಲಿ ಪಾತ್ರದಲ್ಲಿ ಜನಮನ ಗೆದ್ದಿದ್ದ ರಾಧಾ ಭಗವತಿ, ಆ ಪಾತ್ರದಿಂದ ಹಿಂದೆ ಸರಿದಿದ್ದರು. ಹಾಗೆ ...