Bangalore, ಏಪ್ರಿಲ್ 15 -- Amruthadhaare: ಸೃಜನ್‌ ಜತೆ ಭೂಮಿಕಾ ಪತ್ತೆದಾರಿಕೆಗೆ ಹೊರಟ್ರು; ಶಕುಂತಲಾದೇವಿ ಈ ಬಾರಿ ಸಿಕ್ಕಿ ಬೀಳ್ತಾರ? ಅಮೃತಧಾರೆ ಧಾರಾವಾಹಿ ಕಥೆ

ಈ ಸೃಜನ್‌ ಪರಿಚಯವಾದದ್ದೇ ಒಂದು ರೋಚಕ ಘಟನೆಯಲ್ಲಿ. ಭೂಮಿಕಾ, ಸುಧಾಳನ್ನು ಸಾಯಿಸಲು ಜೈದೇವ್‌ ಪ್ಲ್ಯಾನ್‌ ರೂಪಿಸಿದ್ದ. ಗೂಂಡಾಗಳಿಗೆ ಹಣ ನೀಡಿ ಕಾರಿನಲ್ಲಿ ಡಿಕ್ಕಿ ಹೊಡೆದು ಸಾಯಿಸಲು ತಿಳಿಸಿದ. ಈ ಕುರಿತು ಗೂಂಡಾಗಳು ಮಾತನಾಡುತ್ತಿರುವುದು ಇನ್ನೊಬ್ಬ ಚಾಲಕ ಸೃಜನ್‌ ಕಿವಿಗೆ ಬಿದ್ದಿತ್ತು.

ಸುಧಾ ಮತ್ತು ಭೂಮಿಕಾನನ್ನು ಕಾಪಾಡಲು ಸೃಜನ್‌ ಫಾಲೋ ಮಾಡಿದ್ದ. ಇವರಿಗೆ ಗೂಂಡಾಗಳು ಕಾರು ಡಿಕ್ಕಿ ಹೊಡೆಸಲು ಮುಂದಾದಗ ತನ್ನ ಕಾರು ಅಡ್ಡ ತಂದು ನಿಲ್ಲಿಸಿದ್ದ. ಬಳಿಕ ತನ್ನ ಕಾರಲ್ಲಿಯೇ ಇವರೆಲ್ಲರಿಗೂ ಮನೆಗೆ ಡ್ರಾಪ್‌ ನೀಡಿದ್ದ.

ಮನೆಗೆ ಬಂದ ಸೃಜನ್‌ ಬಳಿಕ ಗೂಂಡಾಗಳ ವಿಚಾರವನ್ನು ಭೂಮಿಕಾಗೆ ಹೇಳಿದ್ದ. ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದ. ಎಂಟೆಕ್‌ ಓದಿರುವ ಸೃಜನ್‌ ಜಾಬ್‌ ಕಟ್‌ನಿಂದ ಕೆಲಸ ಕಳೆದುಕೊಂಡು ಚಾಲಕ ವೃತ್ತಿ ಮಾಡಿದ್ದ. ಆತನಿಗೆ ಭೂಮಿಕಾ ಕೆಲಸ ಕೊಡಿಸ...