Bangalore, ಮಾರ್ಚ್ 28 -- ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಅನೇಕ ಘಟನೆಗಳು ನಡೆದಿವೆ. ಮಧ್ಯರಾತ್ರಿ ಭೂಮಿಕಾ ಭಯದಿಂದ ಎದ್ದಿದ್ದಾಳೆ. ಗೌತಮ್‌ ಕೂಡ ಗಾಬರಿಯಿಂದ ಎದ್ದಿದ್ದಾರೆ. ಏನು ವಿಷಯ ಎಂದು ಗೌತಮ್‌ ಕೇಳುತ್ತಾರೆ. ಇವರಲ್ಲಿ ಹೇಳೋದ ಬೇಡ್ವ ಎಂದು ಯೋಚಿಸುತ್ತಾಳೆ. ಇನ್ನೊಂದೆಡೆ ಮಲ್ಲಿ ಮತ್ತು ಜೈದೇವ್‌ ಮಾತನಾಡುತ್ತಿದ್ದಾರೆ. ವಿಶೇಷವಾಗಿ ಗಂಡನ ಮಲ್ಲಿ ವಿಚಾರಿಸಿಕೊಳ್ಳುತ್ತಿದ್ದಾಳೆ. "ಆಕರ್ಷಣೆಗಳು ಜಾಸ್ತಿ. ಕೆನೆ ಹಾಲಿಗೆ ಯಾರು ಹುಳಿ ಹಿಂಡ್ತಾರೋ ಗೊತ್ತಿಲ್ಲ" ಎಂದೆಲ್ಲ ಮಲ್ಲಿ ಒಗಟಾಗಿ ಮಾತನಾಡುತ್ತಾಳೆ. ಮತ್ತೊಂದೆಡೆ ಸದಾಶಿವನ ಮುಂದೆ ಮಗ ಬಂದಿದ್ದಾನೆ. ವಿಶೇಷವಾಗಿ ಕುಡಿದು ಬಂದಿದ್ದಾನೆ. ಆತನಿಗೆ ಕೋಪ ಇದೆ. ಭೂಪತಿಗೆ ಅಪ್ಪ ಕಾಲ್‌ ಮಾಡಿದ್ದು ಆತನಿಗೆ ಇಷ್ಟವಾಗಿಲ್ಲ. ಕುಡಿದು ಬಂದು ಯದ್ವಾತದ್ವಾ ಮಾತನಾಡುತ್ತಾನೆ.

"ನೋಡಿದಿಯಮ್ಮ ಹೇಗೆ ಮಾತನಾಡ್ತಾನೆ. ಸರಿಯಾಗಿ ನಿಂತುಕೊಳ್ಳಲಾಗುತ್ತಿಲ್ಲ ಇವನಿಗೆ. ಇವನು ನನ್ನ ಮಗನಾ? ನಾನು ಸಾಕಿ ಬೆಳೆದ ಮಗನಾ ಇವನು. ಇವನನ್ನು ಹೀಗೆ ನೋಡುವುದಕ್ಕಿಂತ ನಾವು ಮೊದಲು ಹೇ...