ಭಾರತ, ಮಾರ್ಚ್ 20 -- Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರ ಕಳೆದ ಹಲವು ದಿನಗಳಿಂದ ಕಾಣೆಯಾಗಿತ್ತು. ರಾಧಾ ಭಗವತಿ ಹೊಸ ಸೀರಿಯಲ್‌ಗೆ ನಾಯಕಿಯಾದ ತಕ್ಷಣ ಆ ಸ್ಥಾನ ಬೇರೆ ಯಾರೂ ತುಂಬಿರಲಿಲ್ಲ. ಮಲ್ಲಿ ಪಾತ್ರ ಮಾಯಾವಾಗುವ ಆತಂಕದ ಸಮಯದಲ್ಲಿ ಸೀರಿಯಲ್‌ ನಿರ್ದೇಶಕರು ಹೊಸ ಟ್ವಿಸ್ಟ್‌ ನೀಡಿದ್ದಾರೆ. ಮಲ್ಲಿ ಪಾತ್ರಕ್ಕೆ ಹೊಸ ನಟಿ ಆಗಮಿಸಿದ್ದಾಳೆ. ಈಕೆ ರಾಜೇಂದ್ರ ಭೂಪತಿ ಮಗಳು ಎಂಬ ಸುಳಿವು ನೀಡಲಾಗಿದೆ.

ಇಲ್ಲಿಯವರೆಗೆ ಮಲ್ಲಿ ಎಂದರೆ ಅಕ್ಕೋರೆ ಅಕ್ಕೋರೆ ಎನ್ನುವ ಪಾತ್ರಕ್ಕೆ ಸೀಮಿತವಾಗಿತ್ತು. ಈಗ ಮಲ್ಲಿ ಪಾತ್ರಕ್ಕೆ ಹೊಸ ಪವರ್‌ ನೀಡಲಾಗಿದೆ. ಹೌದು, ಮಲ್ಲಿ ಬೇರೆ ಯಾರೂ ಅಲ್ಲ. ರಾಜೇಂದ್ರ ಭೂಪತಿ ಮಗಳು ಎಂಬ ಸೂಚನೆಯನ್ನು ಜೀ ಕನ್ನಡ ವಾಹಿನಿಯ ಇಂದಿನ ಪ್ರೊಮೊ ನೀಡಿದೆ.

ಮಲ್ಲಿ ಬಸುರಿಯಾಗಿದ್ದಳು. ಜೈದೇವ್‌ನ ಎಲ್ಲಾ ನವರಂಗಿ ಆಟವನ್ನು ತಿಳಿದು ಕುದ್ದು ಹೋಗಿದ್ದಳು. ಇಂತಹ ಸಮಯದಲ್ಲಿ ಈಕೆ ತನ್ನ ತಾತನ ಮನೆಗೆ ಹೋಗಿದ್ದಳು. ಅಸಲಿಗೆ, ನಟಿ ರಾಧಾ ಭಗವತಿ ಅವರು ಬೇರೆ ಸೀರಿಯಲ್‌ನ ನಾಯಕಿ ನಟಿಯಾಗಿದ್ದರು. ...