ಭಾರತ, ಮಾರ್ಚ್ 18 -- ಅಮೃತಧಾರೆ ಧಾರಾವಾಹಿಯಲ್ಲಿ ಭೂಪತಿಯು ಗೌತಮ್‌ಗೆ ಕರೆ ಮಾಡಿ ಭಯಪಡಿಸಲು ಪ್ರಯತ್ನಿಸುತ್ತಾನೆ. ಭೂಮಿಕಾ ಹೊಟ್ಟೆಯಲ್ಲಿರುವ ಮಗುವಿನ ಕುರಿತು ಭಯಪಡಿಸುವಂತೆ ಈತನ ಎಚ್ಚರಿಕೆ ಇರುತ್ತದೆ. "ನೋಡಿ ನಿಮ್ಮ ಬದುಕಿನಲ್ಲಿ ಆದ ದುಸ್ಥಿತಿಗೆ ನಾನು ಕಾರಣನಲ್ಲ. ಬೆಂಕಿ ಮೊದಲು ನಮ್ಮನ್ನೇ ಸುಡುತ್ತದೆ. ಇದು ಯಾರಿಗೂ ಒಳ್ಳೆಯದು ಮಾಡೋಲ್ಲ. ಇದು ನೀವೇ ಮಾಡಿಕೊಂಡ ತೊಂದರೆ, ದಯವಿಟ್ಟು ಮತ್ತೆ ಕಾಲ್‌ ಮಾಡುತ್ತಾರೆ" ಎಂದು ಗೌತಮ್‌ ಹೇಳುತ್ತಾರೆ. ಇದಾದ ಬಳಿಕ ಆನಂದ್‌ ಜತೆ ಮಾತನಾಡುತ್ತಾರೆ. "ಮನುಷ್ಯನಿಗೆ ಬುದ್ದಿ ಕೊಟ್ಟಿರೋದು ಇನ್ನೊಬ್ಬರಿಗೆ ಕೆಟ್ಟದು ಮಾಡೋಕ್ಕೆ ಅಲ್ಲ. ಆದರೆ, ಈ ಭೂಪತಿ ಈ ರೀತಿ ಬುದ್ದಿಯನ್ನು ಬಳಸ್ತಾನೆ" ಎನ್ನುತ್ತಾರೆ.

ಅಜ್ಜಿ ಭೂಮಿಕಾಳ ಬಳಿ ಮಾತನಾಡುತ್ತಾರೆ. "ನಿನಗೆ ಒಂದು ಕಿವಿಮಾತು ಹೇಳಬೇಕು. ನೀನು ಎಚ್ಚರಿಕೆಯಿಂದ ಇರಬೇಕು. ನಿನಗೆ ಏನಾದರೂ ಹೆಚ್ಚುಕಮ್ಮಿಯಾದರೆ ಗುಂಡು ಆಕಾಶಭೂಮಿ ಒಂದು ಮಾಡ್ತಾನೆ. ನಿನ್ನ ಹೊಟ್ಟೆಯಲ್ಲಿ ಪುಟ್ಟ ಜೀವ ಬೆಳೆಯುತ್ತಿದೆ. ಗರ್ಭ ಗಟ್ಟಿಯಾಗುವವರೆಗೆ ಎಚ್ಚರಿಕೆಯಿಂದ ಇರ...