ಭಾರತ, ಏಪ್ರಿಲ್ 13 -- ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಹಲವು ಧಾರಾವಾಹಿಗಳ ಪೈಕಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆಗೆ ವಿಶೇಷ ಸ್ಥಾನವಿದೆ. ಈ ಧಾರಾವಾಹಿಗೆ ಸಾಕಷ್ಟು ಅಭಿಮಾನಿ ಬಳಗವಿದೆ. ಹೆಣ್ಣುಮಕ್ಕಳು ಮಾತ್ರವಲ್ಲ ಗಂಡುಮಕ್ಕಳು ಕೂಡ ಈ ಧಾರಾವಾಹಿಯನ್ನು ಇಷ್ಟಪಟ್ಟು ನೋಡುತ್ತಾರೆ. ಎಲ್ಲೂ ಎಳೆದಾಡದೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಾ ಟಿಆರ್‌ಪಿಯಲ್ಲೂ ಅಗ್ರಸ್ಥಾನದಲ್ಲಿರುವ ಅಮೃತಧಾರೆ ಧಾರಾವಾಹಿ ಇತ್ತೀಚೆಗೆ ಹಳಿ ತಪ್ಪುತ್ತಿದೆ.

ಅಮೃತಧಾರೆ ಧಾರಾವಾಹಿಯ ಪ್ರಮುಖ ಆಕರ್ಷಣೆ ಗೌತಮ್ ಹಾಗೂ ಭೂಮಿಕಾ ಜೋಡಿ. ಈ ಜೋಡಿಗಾಗಿಯೇ ಹಲವರು ಧಾರಾವಾಹಿ ನೋಡುತ್ತಾರೆ. ಇವರಿಬ್ಬರ ನಟನೆಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ. ಪಾತ್ರವನ್ನು ಪರಕಾಯ ಪ್ರವೇಶ ಮಾಡುವುದರಲ್ಲಿ ಇವರನ್ನು ಬಿಟ್ಟರೆ ಬೇರಿಲ್ಲ ಎಂಬುವಂತೆ ನಟಿಸುತ್ತಾರೆ. ಇವರ ನಡುವಿನ ಸಂಭಾಷಣೆ, ಲವ್, ರೊಮಾನ್ಸ್ ಎಲ್ಲವೂ ವೀಕ್ಷಕರಿಗೆ ಇಷ್ಟವಾಗುತ್ತದೆ. ಆದರೆ ಕಳೆದ ಕೆಲವು ಸಂಚಿಕೆಗಳಿಂದ ಭೂಮಿಕಾ-ಗೌತಮ್ ತೆರೆ ಮೇಲೆ ಹೆಚ್ಚು ಕಾಣಿಸುತ್ತಿಲ್ಲ. ಇದು ವೀ...