Bangalore, ಫೆಬ್ರವರಿ 8 -- Amruthadhaare serial Yesterday Episode: ಗೌತಮ್‌ ಎಲ್ಲರನ್ನೂ ಕರೆದು ಮಾತನಾಡುತ್ತಿದ್ದಾರೆ. ನಿನ್ನೆ ಅಟ್ಯಾಕ್‌ ಆಯ್ತು, ಅದಕ್ಕೆ ನೀವು ಎಲ್ಲರೂ ಸೇಫ್‌ ಆಗಿದ್ದೀರ ಎಂದು ಕೇಳಲು ಕರೆದೆ ಎನ್ನುತ್ತಾರೆ. ಸಿಸಿಟಿವಿ ನೋಡೋಣ ಎಂದರೆ ಹಾರ್ಡ್‌ಡಿಸ್ಕ್‌ ಕೂಡ ತೆಗೆದುಕೊಂಡು ಹೋಗಿದ್ದಾರೆ ಎಂದು ಗೌತಮ್‌ ಹೇಳುತ್ತಾರೆ. ಈ ಸಮಯದಲ್ಲಿ ಶಕುಂತಲಾದೇವಿಯ ಗಾಯವು ಭೂಮಿಕಾಗೆ ಅನುಮಾನ ಹುಟ್ಟಿಸುತ್ತದೆ. ಬಳಿಕ ಲಕ್ಕಿ ಲಕ್ಷ್ಮಿಕಾಂತ್‌ ಶಕುಂತಲಾದೇವಿಯನ್ನು ಕರೆದುಕೊಂಡು ಹೋಗುತ್ತಾರೆ. ಯಾಕೋ ಭೂಮಿಕಾಗೆ ಅನುಮಾನ ಬರುತ್ತದೆ. ನೇರ ಶಕುಂತಲಾದೇವಿಯ ಬಳಿಗೆ ಬರುತ್ತಾರೆ. ಈಕೆಯ ಕೈ ಬ್ಯಾಂಡೇಜ್‌ ನೋಡಿ ಭೂಮಿಕಾಗೆ ಅನುಮಾನ ಬರುತ್ತದೆ. ಶಕುಂತಲಾ ಮಾಡುತ್ತಿರುವ ನಾಟಕವಾಗಿರಬಹುದೇ ಎಂಬ ಅನುಮಾನ ಆಕೆಗೆ ಬಂದಿದೆ.

"ಅತ್ತೆ ಇದೆಲ್ಲ ಹೇಗಾಯ್ತು?" ಎಂದು ಭೂಮಿಕಾ ಕೇಳುತ್ತಾಳೆ. "ಸಿಸ್ಟರ್‌ ಬಂಡವಾಳ ಎಲ್ಲಾ ಹೊರಗೆ ತೆಗೆಯುವಂತೆ ಕಾಣಿಸ್ತಿದೆ" ಎಂದು ಲಕ್ಷ್ಮಿಕಾಂತ್‌ಗೆ ಭಯದಲ್ಲಿ ಯೋಚಿಸುತ್ತಾನೆ. "ಆಗಲೇ ಹೇಳಿದೆ ಅಲ್ವ, ಆಟ...