ಭಾರತ, ಮಾರ್ಚ್ 22 -- ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ: ಗೌತಮ್‌ ದಿವಾನ್‌ ಎರಡನೇ ಮದುವೆ, ಭೂಮಿಕಾಳ ಕಣ್ಣೀರಧಾರೆ, ಇದಾದ ಬಳಿಕ ಭೂಮಿಕಾ ಮತ್ತು ಗೌತಮ್‌ನ "ಗರ್ಭಿಣಿ" ಕಾಳಜಿ ಸಂಚಿಕೆಗಳಿಂದ ಪ್ರೇಕ್ಷಕರಿಗೆ ಬೇಸರ ಹುಟ್ಟಿಸಿದ್ದ ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಸಂಚಿಕೆಗಳ ನಂತರ ಇದೀಗ ಮತ್ತೆ ಹೊಸ ಚೈತನ್ಯ ಕಾಣಿಸಿಕೊಂಡಿದೆ. ನಿರ್ದೇಶಕರು ಮಲ್ಲಿ ವಿಷಯದಲ್ಲಿ ನೀಡಿದ ಟ್ವಿಸ್ಟ್‌ ವೀಕ್ಷಕರಿಗೆ ಖುಷಿ ನೀಡಿದೆ.

ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಪ್ರೊಮೊ ಪ್ರಕಟಿಸಿದೆ. ಈ ಪ್ರೊಮೊದಲ್ಲಿ ಒಂದಿಷ್ಟು ವಿಚಾರಗಳ ಸುಳಿವು ದೊರಕಿದೆ. ಇದೇ ಸಮಯದಲ್ಲಿ ಮಲ್ಲಿ ಗರ್ಭಿಣಿ ಹೌದೋ ಅಲ್ವೋ, ಎಲ್ಲಾದರೂ "ಮಗುವನ್ನು ತೆಗೆಸಿದ್ದಾರೆಯೇ" "ಅಬಾರ್ಷನ್‌ ಆಯ್ತೇ" ಇತ್ಯಾದಿ ಪ್ರಶ್ನೆಗಳೂ ಮೂಡಿವೆ.

ಈ ಹಿಂದೆ ಮಲ್ಲಿಯಾಗಿ ರಾಧಾ ಭಗವತಿ ನಟಿಸುತ್ತಿದ್ದರು. ಈಗ ಅನ್ವಿತಾ ಸಾಗರ್‌ ಮಲ್ಲಿಯಾಗಿ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಈಕೆಯ ಹೊಟ್ಟೆಯ ಮೇಲೆ ಸೋಷಿಯಲ್‌ ಮೀಡಿಯಾದಲ್ಲಿರುವ ಸಾಕಷ್ಟು ಜನರ ಕಣ್ಣು ಬಿದ್ದಿದೆ. ಹೊಟ್ಟೆಯಲ್...