Bangalore, ಮಾರ್ಚ್ 21 -- Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನು ನಡೆಯಬಹುದು ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿ ಇದ್ದೇ ಇದೆ. ಯಾಕೆಂದರೆ, ಮಲ್ಲಿ ಭೂಪತಿ ಮಗಳು ಎಂಬ ಸುಳಿವನ್ನು ನಿನ್ನೆಯ ಸಂಚಿಕೆ ನೀಡಿತ್ತು. ಹಾಗಾದರೆ, ಮಲ್ಲಿ ತಾತಾನ ಬಳಿ ಸೇರಿದ್ದು ಹೇಗೆ?

ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಪ್ರಕಟಿಸಿದೆ. ಈ ಪ್ರೊಮೊದಲ್ಲಿ ಭೂಪತಿ ಬಗ್ಗೆ ತಾತಾ ಒಂದಿಷ್ಟು ವಿಚಾರಗಳನ್ನು ಗೌತಮ್‌ಗೆ ಹೇಳುವ ಸುಳಿವು ಇದೆ. ಮಲ್ಲಿ ಭೂಪತಿ ಮಗಳು ಎಂದು ಅಜ್ಜ ಖಚಿತಪಡಿಸಿದ್ದಾರೆ. ತಾನು ಭೂಪತಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವಿಚಾರ ಹೇಳಿದ್ದಾರೆ.

ಗೌತಮ್‌ ಮಲ್ಲಿ ಮನೆಗೆ ಆಗಮಿಸಿದ್ದರು. ಮಲ್ಲಿ ಕಳೆದ ಹಲವು ದಿನಗಳಿಂದ ಅಜ್ಜನ ಮನೆಯಲ್ಲಿದ್ದಾಳೆ. ಹೀಗೆ ವಿಚಾರಿಸಿಕೊಂಡು ಹೋಗೋಣ ಎಂದು ಗೌತಮ್‌ ಬಂದಿದ್ದಾರೆ. ಅದಕ್ಕೂ ಮುನ್ನ ಈ ಮಲ್ಲಿಯ ಪಾತ್ರದಾರಿ ಬದಲಾಗಿರುವ ವಿಚಾರವನ್ನೂ ತೋರಿಸಲಾಗಿತ್ತು.

ಈ ಸಮಯದಲ್ಲಿ ತನ್ನ ಟ್ರಂಕ್‌ನ...