Bangalore, ಏಪ್ರಿಲ್ 5 -- Amruthadhaare Serial: ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ಎಂದರೆ ಸಾಕಷ್ಟು ಜನರಿಗೆ ಏನೋ ಖುಷಿ. ಅಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಗಳಿಗೂ ಪ್ರತಿಕ್ರಿಯೆ ನೀಡುತ್ತಾರೆ. ಭೂಮಿಕಾ ತಮ್ಮ ಮನೆ ಮಗಳೇನೋ ಎಂಬಂತೆ ಕಾಳಜಿ ವಹಿಸುತ್ತಾರೆ. ಗೌತಮ್‌ ಪ್ರತಿಯೊಂದು ನಡೆಗೂ "ವಾಹ್‌ ಸೂಪರ್‌" ಅಂತಾರೆ. ಜೈದೇವ್‌ನ ಯೋಜನೆಗಳು ವಿಫಲವಾದಗ "ಹಾಗೇ ಆಗ್ಬೇಕು ಮಗ್ನೇ ನಿಂಗೆ" ಅಂತಾರೆ. ಅಪೇಕ್ಷಾಳ ಮೊಂಡುತನ ಹೆಚ್ಚಾದಗ ಕಾಮೆಂಟ್‌ ಬಾಕ್ಸ್‌ನಲ್ಲಿ ದಬಾಯಿಸುತ್ತಾರೆ. ಶಕುಂತಲಾದೇವಿ ಮಾಡುವ ಕುತಂತ್ರಕ್ಕೆ ಸಿಕ್ಕಾಪಟ್ಟೆ ಬಯ್ತಾರೆ. ಆನಂದನ ಕಾಮಿಡಿಗೆ, ಗೆಳೆತನಕ್ಕೆ ಸೂಪರ್‌ ಅಂತಾರೆ. ಒಟ್ಟಾರೆ, ಅಮೃತಧಾರೆ ಧಾರಾವಾಹಿಯ ಪ್ರತಿಯೊಂದು ಕ್ಯಾರೆಕ್ಟರ್‌ಗಳು "ನಿಜವಾಗಿ ನಡೆಯುತ್ತಿರುವಂತೆ" ಕೆಲವು ವೀಕ್ಷಕರು ಭಾವಿಸುತ್ತಾರೆ. ಆರಂಭದಿಂದಲೂ ಒಳ್ಳೆಯ ಸೀರಿಯಲ್‌ ಎಂಬ ಹೆಸರು ಪಡೆದ ಅಮೃತಧಾರೆಯಲ್ಲಿ ಮಧ್ಯವಯಸ್ಕರ ಲವ್‌ಸ್ಟೋರಿಗೆ ಜನರು ಫಿದಾ ಆಗಿದ್ದಾರೆ.

ಆದರೆ, ಸೀರಿಯಲ್‌ ಕಡೆಗೆ ಜನರನ್ನು ಸೆಳೆಯಲು ನಿರ್ದೇಶಕರು ನಾ...