ಭಾರತ, ಮಾರ್ಚ್ 4 -- Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಮಧುರಳನ್ನು ಭೂಮಿಕಾ ತನ್ನ ಮನೆಗೆ ಆಹ್ವಾನಿಸಿದ್ದಾಳೆ. ಈ ಎಪಿಸೋಡ್‌ನಲ್ಲಿ ಗೌತಮ್‌ ತನ್ನ ಮನೆಗೆ ಬಂದ ಮಧುರಳನ್ನು ನೋಡಿ ಕಣ್ಣರಳಿಸಿ ನಕ್ಕಿದ್ದಾರೆ. ಇವರಿಬ್ಬರ ಜೋಡಿ ಸದ್ಯದಲ್ಲಿಯೇ ಸೆಟ್‌ ಆಗಬಹುದೇ? ಬನ್ನಿ ಇಂದಿನ ಪ್ರೊಮೊದಲ್ಲಿ ಏನೇನಿದೆ ನೋಡೋಣ.

ಗೌತಮ್‌ ಮತ್ತು ಭೂಮಿಕಾ ಮಾತನಾಡುತ್ತಿದ್ದಾರೆ. ನಾಳೆ ನನ್ನ ಫ್ರೆಂಡ್‌ ಮಧುರ ಬರುತ್ತಿದ್ದಾರೆ. ಆಫೀಸ್‌ಗೆ ಹೋಗಬೇಡಿ ಎಂದು ಭೂಮಿಕಾ ಹೇಳುತ್ತಾಳೆ. ಯಾಕೆ ಹೋಗಬಾರದು, ನನಗೆ ಆಫೀಸ್‌ ಕೆಲಸವಿದೆ ಎಂದು ಗೌತಮ್‌ ಹೇಳುತ್ತಾರೆ.

ನಿನ್ನೆ ನೀವೇ ಹೇಳಿದ್ದಲ್ವ "ನಿಮಗೆ ಗೊತ್ತಿಲ್ಲದ ನನ್ನ ಫ್ರೆಂಡ್‌ ಯಾರು? ಅಂತ. ಅದಕ್ಕೆ ಅವರನ್ನು ಮನೆಗೆ ಆಹ್ವಾನಿಸಿದ್ದೇನೆ ಎಂದು ಭೂಮಿಕಾ ಹೇಳುತ್ತಾರೆ. ಕೊನೆಗೆ ಮನೆಯಲ್ಲಿ ಉಳಿಯಲು ಗೌತಮ್‌ ಒಪ್ಪುತ್ತಾರೆ.

ಗೌತಮ್‌ಗೆ ವಿಷಯ ಹೇಳಿದ್ದೇನೆ. ನೀವು ನಾಳೆ ಮಧುರಳನ್ನು ಮನೆಗೆ ಬರಲು ಹೇಳಿ ಎಂದು ಶಕುಂತಲಾದೇವಿಗೆ ಭೂಮಿಕಾ ಹೇಳುತ್ತಾಳೆ. ಅ...