Bengaluru, ಫೆಬ್ರವರಿ 19 -- ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಿರಲಿದೆ ಎಂದು ಪ್ರೊಮೊ ಮೂಲಕ ಜೀ ಕನ್ನಡ ವಾಹಿನಿಯು ಝಲಕ್‌ ನೀಡಿದೆ. ಇದರಲ್ಲಿ ಶಕುಂತಲಾದೇವಿಯು ಭೂಮಿಕಾ ಗರ್ಭಿಣಿ ಎಂದು ತಿಳಿದು ಶಾಕ್‌ಗೆ ಒಳಗಾಗುವ ವಿವರ ಇದೆ. ಸದ್ಯ ತಾನು ಗರ್ಭಿಣಿ ಎಂಬ ವಿಚಾರವನ್ನು ಭೂಮಿಕಾ, ಗೌತಮ್‌ ದಿವಾನ್‌ಗೆ ತಿಳಿಸಿಲ್ಲ. ಆದರೆ, ಈಕೆಯ ಬದಲಾದ ವರ್ತನೆ ನೋಡಿ ಅಜ್ಜಮ್ಮನಿಗೆ ಅನುಮಾನ ಬಂದಿದೆ. "ಇದು ಅದೇ" ಎಂದು ಹೇಳಿದ್ದಾರೆ. ಭೂಮಿಕಾ ಮತ್ತು ಅಜ್ಜಿ ಮಾತನಾಡುವುದನ್ನು ಮರೆಯಲ್ಲಿ ಲಕ್ಕಿ ಲಕ್ಷ್ಮಿಕಾಂತ್‌ ಕೇಳಿಸಿಕೊಂಡಿದ್ದಾನೆ. ಈ ವಿಚಾರ ಅಕ್ಕನ ಕಿವಿಗೆ ಮುಟ್ಟಿಸಬೇಕು ಎಂದುಕೊಂಡಿದ್ದಾನೆ. "ಸಿಸ್ಟರ್‌.. ಸಿಸ್ಟರ್‌...." ಎಂದು ತಕ್ಷಣ ಈ ವಿಚಾರ ಅಕ್ಕ ಶಕುಂತಲಾದೇವಿ ಕಿವಿಗೆ ಹಾಕಿದ್ದಾನೆ. ಈ ಸುದ್ದಿ ಕೇಳಿ ಶಕುಂತಲಾದೇವಿಗೆ ಆಘಾತವಾಗಿದೆ.

"ಯಾವುದೇ ಕಾರಣಕ್ಕೂ ಈ ಸುದ್ದಿ ನಿಜ ಆಗಬಾರದು. ಈ ವಿಚಾರ ಗೌತಮ್‌ ಕಿವಿಗೆ ಬೀಳಬಾರದು" ಎಂದು ಶಕುಂತಲಾ ಹೇಳುತ್ತಾರೆ. "ಗೌತಮ್‌ ಕರೆಸುವ ಮುನ್ನವೇ ನಾವೇ ನಮ್ಮ ಡಾಕ್ಟರ್‌ರನ್ನು ಕರೆ...