ಭಾರತ, ಮಾರ್ಚ್ 4 -- Amruthadhaare Serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯ ಕಥೆ. ಗೌತಮ್‌ಗೆ ಎರಡನೇ ಮದುವೆ ಮಾಡುವ ಉತ್ಸಾಹದಲ್ಲಿದ್ದಾರೆ ಶಕುಂತಲಾದೇವಿ. ಹೇಗಾದರೂ ಮಾಡಿ ಭೂಮಿಕಾಳ ಮನಸ್ಸು ಬೇರ ಕಡೆಗೆ ಹೋಗದಂತೆ ಎಚ್ಚರವಹಿಸುತ್ತಿದ್ದಾರೆ. ಗೌತಮ್‌ಗೆ ಮಗುವಾಗಲೇಬೇಕು, ಆತನಿಗೂ ವಯಸ್ಸಾಗುತ್ತಿದೆ, ತಡ ಮಾಡಬೇಡ ಎಂದು ಭೂಮಿಕಾಳ ಬಳಿ ಹೇಳುತ್ತಾರೆ. ಅತ್ತೆ ಹೇಳಿದ್ದಕ್ಕೆಲ್ಲ ಭೂಮಿಕಾ ಹೂಂಗುಟ್ಟುತ್ತಾಳೆ. "ನಾಳೆಯ ದಿನ ನಿನಗೆ ಆದಂತೆ ಅವನಿಗೂ ಮಕ್ಕಳಾಗದೆ ಇದ್ದರೆ ಕಷ್ಟ ಅಲ್ವ. ಹೀಗಾಗಿ, ಅವನಿಗೆ ಬೇಗ ಎರಡನೇ ಮದುವೆ ಕುರಿತು ತಿಳಿಸು. ನನ್ನ ಕನ್ಸರ್ನ್‌ ಅರ್ಥ ಮಾಡಿಕೋ" ಎಂದು ಶಕುಂತಲಾದೇವಿ ಹೇಳುತ್ತಾಳೆ. "ಸಡನ್‌ ಆಗಿ ಡಿಸಿಷನ್‌ ತೆಗೆದುಕೊಳ್ಳಲು ಆಗದು. ನನಗೂ ಟೈಂ ಬೇಕು. ಅದಕ್ಕೂ ಮೊದಲು ನನಗೆ ಆ ಹುಡುಗಿ ಜತೆ ಮಾತನಾಡಬೇಕು" ಎಂದು ಭೂಮಿಕಾ ಹೇಳುತ್ತಾಳೆ. ಇದನ್ನು ಕೇಳಿ ಶಕುಂತಲಾದೇವಿಗೆ ಅಚ್ಚರಿಯಾಗುತ್ತದೆ. "ನೀನು ಮೀಟ್‌ ಆಗ್ತಿಯಾ, ಮದುವೆಯಾಗುವುದು ಅವನು" ಎಂದು ಶಕುಂತಲಾದೇವಿ ಅಚ್ಚರಿಗೊಳ್ಳ...