ಭಾರತ, ಮಾರ್ಚ್ 7 -- Amruthadhaare Serial Story: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಗೌತಮ್‌ ತನ್ನ ನಿರ್ಧಾರ ಪ್ರಕಟಿಸಿದ್ದಾರೆ. ನೀನು ಎರಡನೇ ಮದುವೆಯಾಗಲೇಬೇಕು ಎಂದು ಶಕುಂತಲಾದೇವಿ ಹೇಳಿದಾಗ "ಭೂಮಿಕಾಳನ್ನು ಕಳೆದುಕೊಳ್ಳುವುದೂ ಒಂದೇ, ನನ್ನ ಉಸಿರು ನಿಲ್ಲುವುದೂ ಒಂದೇ" ಎಂದು ದೃಢವಾಗಿ ತಿಳಿಸಿದ್ದಾರೆ. ಈ ಮೂಲಕ ಭೂಮಿಕಾ ತನ್ನ ಪಾಲಿಗೆ ಕೇವಲ ಹೆಂಡತಿ ಅಲ್ಲ, ಆಕೆ ತನ್ನ ಸರ್ವಸ್ವ ಎಂದು ಸಾರಿ ಹೇಳಿದ್ದಾರೆ. ಈ ಮೂಲಕ ತನ್ನ ಮಲತಾಯಿ ಶಕುಂತಲಾದೇವಿಯ ನಿರ್ಧಾರಗಳಿಗೆ ತನ್ನ ವಿರೋಧ ವ್ಯಕ್ತಪಡಿಸಿದ್ದಾನೆ.

ನಿಜ ಹೇಳಬೇಕೆಂದರೆ, ಈ ಮಧುರಾ ಎಂಬ ಸುಂದರಿ ಬಂದಿರುವುದು ನನ್ನನ್ನು ಮದುವೆಯಾಗಲು ಎಂಬ ಸಂಗತಿ ಗೌತಮ್‌ಗೆ ಗೊತ್ತಿರಲಿಲ್ಲ. ಕಳೆದ ಕೆಲವು ದಿನಗಳಿಂದ ಗೌತಮ್‌ ದಿವಾನ್‌ ಮನೆಯಲ್ಲಿ ಕಣ್ಣೀರ ಎಪಿಸೋಡ್‌ಗಳು ನಡೆದಿರುವುದೂ ಆತನ ಅರಿವಿಗೆ ಬಂದಿರುವುದಿಲ್ಲ. ಭೂಮಿಕಾಳ ಬದಲಾದ ವರ್ತನೆಯೂ ಆತನ ಅರಿವಿಗೆ ಬಂದಿರಲಿಲ್ಲ. ಹಳೆಯ ಲವರ್‌ ವಿಷಯ ಕೆದಕಿದ್ದೂ ಅನುಮಾನ ಹುಟ್ಟಿಸಿರಲಿಲ್ಲ. "ಈಕೆಗೆ ಮೂಡ್‌ ಸ್ವಿಂಗ್‌ ಆಗುತ್ತಿ...