ಭಾರತ, ಏಪ್ರಿಲ್ 5 -- Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಗೌತಮ್‌ ಮಾತನಾಡುತ್ತಿದ್ದಾರೆ. ಗರ್ಭಿಣಿ ಪತ್ನಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಆಕೆಗೆ ಹಾಲು, ತಿಂಡಿ ಎಲ್ಲಾ ನೀಡಿದ್ದಾರೆ. ಸರ್‌ಪ್ರೈಸ್‌ ಎಂದು ಹೊಸ ಸೀರೆಯನ್ನೂ ಕೊಟ್ಟಿದ್ದಾರೆ. ಒಟ್ಟಾರೆ, ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ತನ್ನ ಪತ್ನಿಗೆ ಪ್ರೀತಿಯ ಒಲವಧಾರೆ ಸುರಿಸಿದ್ದಾರೆ.

ಇದೇ ಸಮಯದಲ್ಲಿ ಶಕುಂತಲಾ ದೇವಿ ಮತ್ತು ಲಕ್ಕಿ ಲಕ್ಷ್ಮಿಕಾಂತ್‌ ಮಾತನಾಡುತ್ತಿದ್ದಾರೆ. ಲಕ್ಕಿ ಲಕ್ಷ್ಮಿಕಾಂತ್‌ಗೆ ತಾನು ಮಾಡಿರುವ ಘನಕಾರ್ಯದ ಕುರಿತು ಶಕುಂತಲಾ ಹೇಳುತ್ತಿದ್ದಾರೆ.

ಭೂಮಿಕಾ ಬರುವ ಮೆಟ್ಟಿಲ ದಾರಿಯಲ್ಲಿ ಕೆಲಸದವರು ನೆಲ ಒರೆಸಿದ್ದಾರೆ. ಆ ಮೆಟ್ಟಿಲುಗಳಿಗೆ ಶಕುಂತಲಾದೇವಿ ಇನ್ನಷ್ಟು ನೀರು ಹಾಕಿದ್ದಾರೆ. ಜಾರಿ ಬೀಳಿಸುವ ಯೋಜನೆಯಲ್ಲ. ಆಕೆಯ ಪ್ಲ್ಯಾನ್‌ ಇನ್ನೂ ದೊಡ್ಡದಿದೆ.

ಆ ನೀರಿಗೆ ಒಂದು ವೈರ್‌ ಇಟ್ಟು, ಆ ವೈರ್‌ ಅನ್ನು ಕರೆಂಟ್‌ ಪ್ಲಗ್‌ಗೆ ಸಿಲುಕಿಸಿದ್ದಾಳೆ. ಈ ಮೂಲಕ ನೆಲದಲ್ಲಿ ಕರೆಂ...