ಬೆಂಗಳೂರು, ಮಾರ್ಚ್ 24 -- ಅಮೃತಧಾರೆ ಧಾರಾವಾಹಿಯಲ್ಲಿ ಅಚ್ಚರಿಯ ಸರಮಾಲೆ ಮುಂದುವರೆದಿದೆ. ಅಮೃತಧಾರೆ ಧಾರಾವಾಹಿ ಮತ್ತೆ ಹಳಿಗೆ ಮರಳಿದೆ. ಆದರೆ, ಇದೀಗ ವಿಲನ್‌ ಪಡೆಗಳು ಮತ್ತೆ ವಿಜ್ರಂಭಿಸಲು ಆರಂಭಿಸಿವೆ. ಜೈದೇವ್‌ ಮತ್ತೆ ಗೂಂಡಗಳನ್ನು ಕರೆಸಿಕೊಂಡಿದ್ದಾನೆ. ಅಪಘಾತದ ಮೂಲಕ ಕೊಲೆ ಮಾಡಿಸುವ ಸೀರಿಯಲ್‌ ತಂತ್ರಗಳು ಮುಂದುವರೆದಿವೆ.

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆಯಾಗಿದೆ. ಇದರಲ್ಲಿ ಸುಧಾ ಎಲ್ಲಿಗೋ ಹೊರಡುತ್ತಿದ್ದಾಳೆ. ಆಗ ಅಲ್ಲಿದ್ದ ಭೂಮಿಕಾ "ಎಲ್ಲಿಗೆ" ಎಂದು ಕೇಳುತ್ತಾಳೆ. ಮಗು ಲಚ್ಚಿಯನ್ನು ಸ್ಕೂಲ್‌ನಿಂದ ಕರೆದುಕೊಂಡು ಬರಲು ಹೋಗುತ್ತಿರುವೆ ಎಂದು ಸುಧಾ ಹೇಳುತ್ತಾಳೆ.

ಹಾಗಾದರೆ ನಿನ್ನ ಜತೆ ನಾನೂ ಬರುವ ಎಂದು ಸುಧಾಳ ಜತೆ ಭೂಮಿಕಾ ಕೂಡ ಹೊರಡುತ್ತಾಳೆ. ಮೂವರು ಶಾಲೆಗೆ ತಲುಪುತ್ತಾರೆ. ಮಗುವನ್ನು ಕರೆದುಕೊಂಡು ಬರುವ ಸಮಯದಲ್ಲಿ ಜೈದೇವ್‌ ತನ್ನ ಗೂಂಡಗಳಿಗೆ ಕರೆ ಮಾಡುತ್ತಾನೆ.

ಇವತ್ತು ಸುಧಾ ಮತ್ತು ಲಚ್ಚಿ ಉಳಿಯಬಾರದು ಸಾಯಿಸಿ ಬಿಡಿ ಎನ್ನುತ್ತಾನೆ ಜೈದೇವ್‌. ಆಗ, ಆ ಗೂಂಡಗ...