Bangalore, ಏಪ್ರಿಲ್ 2 -- Amruthadhaare Serial Today Episode: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆ ಮಾಡಿದೆ. ಇದರಲ್ಲಿ ದಿಯಾಳ ಕುರಿತು ಸ್ಪೋಟಕ ಮಾಹಿತಿಯೊಂದನ್ನು ಶ್ರಾವಣಿ ನೀಡಿದ್ದಾಳೆ. ದಿಯಾಳ ಖತರ್ನಾಕ್‌ ದುರ್ಬುದಿ ತಿಳಿದು ಜೈದೇವ್‌ ಹೌಹಾರಿದ್ದಾನೆ.

ದಿಯಾ ಮತ್ತು ಜೈದೇವ್‌ ಲವ್‌ಬರ್ಡ್ಸ್‌ ರೀತಿ ಇದ್ದವರು. ಜೈದೇವ್‌ಗೆ ದಿಯಾ ಎಂದರೆ ಪಂಚಪ್ರಾಣ. ಆಕೆಯೂ ಜಾಣೆ, ಈತನಿಂದ ಎಷ್ಟು ಸಾಧ್ಯವೋ ಅಷ್ಟು ಹಣ ಪೀಕಿಸುತ್ತಿದ್ದಳು, ಕಾರು, ಅದು ಇದು ಎಂದು ಬೇಕಾದ್ದನ್ನು ಪಡೆಯುತ್ತಿದ್ದಳು. ಈಕೆಯದ್ದು ನಿಜವಾದ ಲವ್‌ ಎಂದುಕೊಂಡಿದ್ದ ಜೈದೇವ್‌.

ಮಲ್ಲಿಯನ್ನು ಮದುವೆಯಾದ ಬಳಿಕ ಜೈದೇವ್‌ ಅಡ್ಡದಾರಿ ಹಿಡಿದಿದ್ದ. ಮಲ್ಲಿಯನ್ನು ನನಗೆ ಬಲವಂತವಾಗಿ ಮದುವೆ ಮಾಡಿಸಿದ್ರು ಎನ್ನುವ ಕೋಪ ಈತನಿಗೆ. ಮಲ್ಲಿಗೆ ಮೋಸ ಮಾಡಿ ಬಸುರಿಯಾಗಿಸಿದ್ದ ಈತ ಬಳಿಕ ಆಕೆಯನ್ನು ನಡುನೀರಲ್ಲಿ ಬಿಟ್ಟು ಬಿಡಲು ಯೋಜಿಸಿದ್ದ. ಆದರೆ, ಗೌತಮ್‌- ಭೂಮಿಕಾ ಇವರಿಬ್ಬರ ಮದುವೆ ಮಾಡಿಸಿದ್ರು.

ಬಳಿಕ ಜೈದೇವ್‌ಗೆ ದಿಯಾಳ ...