ಭಾರತ, ಮಾರ್ಚ್ 25 -- Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ ಮತ್ತು ಶಕುಂತಲಾದೇವಿ ಕಿಲ್ಲಿಂಗ್‌ ಮೂಡ್‌ನಲ್ಲಿದ್ದಾರೆ. ಶಕುಂತಲಾದೇವಿಯು ವಿಷದ ಬಾಟಲಿ ಹಿಡಿದುಕೊಂಡು ಭೂಮಿಕಾಳನ್ನು ಸಾಯಿಸಲು ಪ್ಲ್ಯಾನ್‌ ಮಾಡುತ್ತಿದ್ದಾಳೆ. ಇನ್ನೊಂದೆಡೆ ಜೈದೇವ್‌ ರೌಡಿಗಳನ್ನು ಬಿಟ್ಟು ಇವರನ್ನು ಸಾಯಿಸಲು ಯತ್ನಿಸುತ್ತಾನೆ.

ಈಗಾಗಲೇ ನಿನ್ನೆಯ ಎಪಿಡೋಸ್‌ನಲ್ಲಿ ಕೆಲವೊಂದು ನಾಟಕೀಯ ವಿದ್ಯಮಾನಗಳು ನಡೆದಿವೆ. ಜೈದೇವ್‌ ಗೂಂಡಾಗಳಿಗೆ ಹಣ ನೀಡಿ ಭೂಮಿಕಾ, ಸುಧಾ ಮತ್ತು ಲಚ್ಚಿಯನ್ನು ಸಾಯಿಸಲು ತಿಳಿಸಿರ್ತಾನೆ. ಆದರೆ, ಕೊನೆಕ್ಷಣದಲ್ಲಿ ಈ ಪ್ಲ್ಯಾನ್‌ ಮಿಸ್‌ ಆಗಿದೆ.

ಚಾಲಕ ಪಟಪಟನೆ ಮಾತನಾಡುತ್ತ ಇವರನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಈತನ ಲವಲವಿಕೆಗೆ ಭೂಮಿಕಾ ಖುಷಿಯಾಗಿದ್ದಾರೆ. ಮನೆ ತಲುಪಿಸಿದ ಬಳಿಕ ಚಾಲಕ ಹೊರಡುವಾಗ ಲಚ್ಚಿ "ಬನ್ನಿ ಅಂಕಲ್‌ ಕಾಫಿ ಕುಡಿದುಕೊಂಡು ಹೋಗಿ" ಎಂದಿದ್ದಾಳೆ.

ಆತ ಮನೆಯಲ್ಲಿ ಕಾಫಿ ಕುಡಿದಿದ್ದಾನೆ. ಹೊರಡುವ ಮುನ್ನ ಭೂಮಿಕಾ ಅವರಲ್ಲಿ "ಮೇಡಂ ನಿಮ್ಮಲ್ಲಿ ಒಂದು ವಿಷಯ ಹೇ...