ಭಾರತ, ಮಾರ್ಚ್ 28 -- ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆಯಾಗಿದೆ. ಈ ಪ್ರೊಮೊದಲ್ಲಿ ಮಲ್ಲಿ ಮತ್ತು ಭೂಮಿಕಾ ದೇವಸ್ಥಾನಕ್ಕೆ ಬಂದಿದ್ದಾರೆ. ಅದೇ ದೇವಸ್ಥಾನದಲ್ಲಿ ದಿಯಾಳಿಗೆ ತಾಳಿ ಕಟ್ಟಲು ಜೈದೇವ್‌ ರೆಡಿಯಾಗಿದ್ದಾನೆ.

ಫ್ಲ್ಯಾಷ್‌ಬ್ಯಾಕ್‌: ಇನ್ನೊಂದೆಡೆ ದಿಯಾ ಮತ್ತು ಜೈದೇವ್‌ ಇದ್ದಾರೆ. ದಿಯಾ ಬೇಸರದಲ್ಲಿ ಮಾತನಾಡುತ್ತಾಳೆ. "ನಾನು ಗರ್ಲ್‌ ಫ್ರೆಂಡ್‌ ಆಗಲು ಬೇಕು. ಹೆಂಡತಿಯಾಗಲು ಬೇಡ ಅಲ್ವಾ" ಎಂದು ದಿಯಾ ಹೇಳುತ್ತಾಳೆ. ಒಟ್ಟಾರೆ ಮದುವೆಗೆ ಸಾಕಷ್ಟು ಒತ್ತಾಯ ಮಾಡುತ್ತಾಳೆ. ಕೊನೆಗೆ ಮದುವೆಯಾಗಲು ಒಪ್ಪುತ್ತಾನೆ. "ಮದುವೆ ಯಾವಾಗ ಅಂತ ನಾನು ಯೋಚನೆ ಮಾಡಿ ಹೇಳುವೆ. ನೀನು ರೆಡಿಯಾಗಿರು" ಎಂದು ಹೇಳುತ್ತಾನೆ. ಇದು ನಿನ್ನೆಯ ಸಂಚಿಕೆಯಲ್ಲಿ ನಡೆದದ್ದು.

ಅಮೃತಧಾರೆಯ ಹೊಸ ಪ್ರೊಮೊದಲ್ಲಿ ಜೈದೇವ್‌ ಮತ್ತು ದಿಯಾಳ ಮದುವೆ ಸಿದ್ಧತೆಯ ಬಗ್ಗೆ ತೋರಿಸಲಾಗಿದೆ. ಬಹುಶಃ ಈ ಮದುವೆ ಎಪಿಸೋಡ್‌ ಇನ್ನೂ ಹಲವು ದಿನಗಳು ಕಾಲ ಇರಬಹುದು. ಅದಕ್ಕೆ ಪೂರ್ವಭಾವಿಯಾಗಿ ಈ ಪ್ರೊಮೊ ಬಿಡುಗಡೆ ಮಾಡಿರಬಹುದು.

ಜೈದೇವ್‌ ದಿಯಾಳನ್ನು ...