Bangalore, ಮಾರ್ಚ್ 13 -- Amruthadhaare Serial: ಜೀ ಕನ್ನಡವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಅನಿರೀಕ್ಷಿತ ಟ್ವಿಸ್ಟ್‌ ಕಾಣಿಸಿಕೊಂಡಿದೆ. ಗೌತಮ್‌ ಎರಡನೇ ಮದುವೆ ವಿಷಯದಲ್ಲಿ ಮಧುರಾ ಎಂಬ ಯುವತಿಗೆ ಅನ್ಯಾಯವಾಗುತ್ತಿದೆಯಲ್ವ ಎಂದು ಯೋಚಿಸುವವರಿಗೆ ಇಂದಿನ ಎಪಿಸೋಡ್‌ನಲ್ಲಿ ಉತ್ತರ ದೊರಕಲಿದೆ. ಏಕೆಂದರೆ, ಇದು ನಾನು ಮತ್ತು ಗೌತಮ್‌ ಸೇರಿ ಮಾಡಿರುವ ನಾಟಕ ಎಂದು ಮಧುರಾ ಹೇಳಿದ್ದಾಳೆ. ಈ ಮೂಲಕ ಗೌತಮ್‌ಗೆ ಎರಡನೇ ಮದುವೆ ಮಾಡಲು ಮುಂದಾದ ಶಕುಂತಲಾ ಗ್ಯಾಂಗ್‌ಗೆ ಆಘಾತವಾಗಿದೆ. ವಾಹಿನಿಯು ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಇನ್ನಷ್ಟು ವಿಚಾರಗಳು ತಿಳಿದುಬಂದಿವೆ.

"ಗೌತಮ್‌ ನನಗೆ ತಾಳಿ ಕಟ್ಟುವ ಬದಲು ಭೂಮಿಕಾಳಿಗೆ ತಾಳಿ ಕಟ್ಟಿದ್ದು ನೋಡಿ ನನಗೆ ಆಘಾತವಾಗಿಲ್ಲ. ಏಕೆಂದರೆ, ಇದು ನಾನು ಮತ್ತು ಗೌತಮ್‌ ಸೇರಿ ಮಾಡಿರುವ ನಾಟಕ" ಎಂದು ಮಧುರಾ ಹೇಳುತ್ತಾರೆ. ರಾಧಾ ರಮಣ ಸೀರಿಯಲ್‌ನಲ್ಲಿ ಮಿಸ್‌ ಆಗಿದ್ದ ಶ್ವೇತಾ ಪ್ರಸಾದ್‌ ಈ ಸೀರಿಯಲ್‌ಗೆ ಮಧುರಾ ಆಗಿ ಅತಿಥಿ ಪಾತ್ರದಲ್ಲಿ ಆಗಮಿಸಿದ್ದರು. ಮಧುರಾಳ ಮಾತು ಕೇಳಿ ಅಜ್ಜಿ ಖುಷಿಯಾಗಿದ್ದ...