ಭಾರತ, ಏಪ್ರಿಲ್ 10 -- Amruthadhare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಇದರಲ್ಲಿ ಭಾಗ್ಯಮ್ಮನಿಗೆ ಹಳೆಯ ಘಟನೆಗಳೆಲ್ಲ ನೆನಪಾದ ಕ್ಷಣವನ್ನು ತೋರಿಸಲಾಗಿದೆ. ಶಕುಂತಲಾದೇವಿ ಗ್ಯಾಂಗ್‌ಗೆ ಇದು ಭಯ ಹುಟ್ಟಿಸುವಂತಹ ಸಂಗತಿಯಾಗಿದೆ.

ಕ್ರಿಕೆಟ್‌ ಮ್ಯಾಚ್‌ ನೋಡುತ್ತ ಗೌತಮ್‌ ಖುಷಿಯಾಗಿದ್ದಾರೆ. ಮ್ಯಾಚ್‌ ಗೆದ್ದ ಖುಷಿಗೆ ಏನಾದರೂ ಮಾಡಬೇಕು ಎಂದೆನಿಸಿದೆ. ಸ್ಟಾಕ್‌ನಲ್ಲಿರುವ ಪಟಾಕಿಯನ್ನು ತೆಗೆದುಕೊಂಡು ಹಚ್ಚಿದ್ದಾರೆ.

ಪಟಾಕಿ ಡಮ್‌ಡುಂ ಎಂದು ಸಿಡಿದಿದೆ. ಈ ಸದ್ದಿಗೆ ಕೋಣೆಯಲ್ಲಿ ಮಲಗಿದ್ದ ಭಾಗ್ಯಮ್ಮಳಿಗೆ ಎಚ್ಚರವಾಗಿದೆ. ಆಕೆ ಬೆಚ್ಚಿ ಬಿದ್ದಿದ್ದಾರೆ.

ಗೌತಮ್‌ ತನ್ನ ತಂಗಿ ಮತ್ತು ತಾಯಿಯನ್ನು ಬಹಳಷ್ಟು ಸಮಯದಿಂದ ಹುಡುಕುತ್ತಿದ್ದರು. ಇವರಿಬ್ಬರನ್ನು ಹುಡುಕಲು ಪ್ರೈವೇಟ್‌ ಏಜೆನ್ಸಿಯ ನೆರವು ಪಡೆದಿದ್ದರು. ಪೊಲೀಸರ ನೆರವೂ ಪಡೆದಿದ್ದರು. ಆದರೆ, ಇವರ ಸುಳಿವು ಸಿಕ್ಕಿರಲಿಲ್ಲ. ಆದರೆ, ಅಚಾನಕ್ಕಾಗಿ ಇವರಿಬ್ಬರು ಪತ್ತೆಯಾಗಿದ್ದರು.

ಭಾಗ್ಯಮ್ಮ ಮ...