Bangalore, ಜನವರಿ 28 -- ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯಲ್ಲಿ ಶಕುಂತಲಾದೇವಿ ಮತ್ತು ಲಕ್ಷ್ಮಿಕಾಂತ ಮಾತನಾಡುತ್ತಾರೆ. ಮಹಿಮಾ ನಾಲ್ಕು ದಿನ ಇದ್ದು ಹೋಗಲು ಬಂದವಳು ಅಲ್ಲ, ಇಲ್ಲೇ ಇರಲು ಬಂದವಳು ಎಂಬ ವಿಷಯ ಅವರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಅವಳು ಇಲ್ಲೇ ಇದ್ದರೆ ನಮಗೆ ಪ್ರಾಬ್ಲಂ ಎಂದು ಅವರು ಮಾತನಾಡಿಕೊಳ್ಳುತ್ತಿದ್ದಾರೆ. ಭಾಗ್ಯಮ್ಮನ ಟೆನ್ಷನ್‌ ನಡುವೆ ಈ ಮಹಿಮಾ ಬೇರೆ ಎಂದು ಶಕುಂತಲಾದೇವಿ ಟೆನ್ಷನ್‌ ಮಾಡಿಕೊಳ್ಳುತ್ತಿದ್ದಾರೆ.

ಮಹಿಮಾಳ ಬಳಿಗೆ ಗೌತಮ್‌ ಮತ್ತು ಭೂಮಿಕಾ ಬರುತ್ತಾರೆ. "ಲೈಫ್‌ ನಡೀತಾ ಇದೆ ಎಂದು ನನಗೆ ಅನಿಸ್ತಾ ಇಲ್ಲ. ನಿನ್ನ ಮನಸ್ಸು ಹೇಗಿದೆ ಎಂದು ನನಗೆ ಅರ್ಥವಾಗುತ್ತಿದೆ. ಸಮ್‌ಥಿಂಗ್‌ ಈಸ್‌ ರಾಂಗ್‌ ವಿತ್‌ ಯು" ಎಂದು ಗೌತಮ್‌ ಕೇಳುತ್ತಾರೆ. ಮಹಿಮಾ ತನ್ನ ಕಥೆ ಹೇಳುತ್ತಾಳೆ. "ನಾನು ದುಡಿದು ತಂದಿರುವುದರಲ್ಲಿ ಉಂಡುಕೊಂಡು ತಿಂದುಕೊಂಡು ಶೋಕಿ ಮಾಡಿಕೊಂಡು ಆರಾಮವಾಗಿದ್ದೀಯ. ಅದೇನೋ ಬಿಸ್ನೆಸ್‌ ಮಾಡ್ತಾ ಇದ್ದಿಯಲ್ವ. ಅದು ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯೋದಿಲ್ಲ" ಎಂದೆಲ್ಲ ಜೀವನ್‌ ಹೇಳಿ...